ಆರ್ಟ್ ಆಫ್ ಲಿವಿಂಗ್ ಯೋಗ ಹಬ್ಬ
ಬೆಂಗಳೂರು,
ಮಾ.8: ಲೋಕವಿಖ್ಯಾತ ಆಧ್ಯಾತ್ಮ ವಿಚಾರ ಮಂಟಪ ಆರ್ಟ್ ಆಫ್ ಲಿವಿಂಗ್ ಮತ್ತು ಸಸ್ಯಾಹಾರಿ ಹೋಟೆಲ್ ಮಯ್ಯಾಸ್ ರೆಸ್ಟೋರೆಂಟ್ ಜಂಟಿಯಾಗಿ ಮಾರ್ಚ್ 10ರಿಂದ ಎಂಟು ದಿನಗಳ ಕಾಲ ಯೋಗ ಹಬ್ಬ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಹಮ್ಮಿಕೊಂಡಿವೆ. ನಗರದ ಮಲ್ಲೇಶ್ವರಂ ಆಟದ ಮೈದಾನದಲ್ಲಿ ನಡೆಯುವ 'ಯೋಗಹಬ್ಬ'ಪ್ರತಿ ದಿನ ಬೆಳಿಗ್ಗೆ 6 ರಿಂದ 8 ಮತ್ತು ಸಂಜೆ 7 ರಿಂದ 9 ರ ವರೆಗೆ ನಡೆಯಲಿದೆ ಎಂದು ಆರ್ಟ್ ಆಫ್ ಲಿವಿಂಗ್ ಪತ್ರಿಕಾ ಪ್ರಕಟಣೆ ತಿಳಿಸಿದೆ. id="toptextpromo">ಮಧುಮೇಹ,
ರಕ್ತದೊತ್ತಡ, ಮೈಗ್ರೇನ್, ಅಸ್ತಮಾ ಸೇರಿದಂತೆ ಹಲವು ಕಾಯಿಲೆಗಳಿಗೆ ಅಗತ್ಯ ಯೋಗಾಭ್ಯಾಸ ಹೇಳಿ ಕೊಡಲಾಗುವುದು. ಬೇಸಿಗೆಯಲ್ಲಿ ತಂಪಾಗಿರಲು ಶೀತಲ ಪ್ರಾಣಾಯಾಮ ಕೂಡ ಕಲಿಸಲಾಗುವುದು. ಒಂದು ಬಾರಿ ಕಲಿತು ಮನೆಯಲ್ಲೇ ದಿನನಿತ್ಯ ಅಭ್ಯಾಸ ಮಾಡಬಹುದು. ಈ ಯೋಗ ಹಬ್ಬಕ್ಕೆ ರೂ. 500 ಪಾಸು ದೊರೆಯಲಿದ್ದು ಇದರಲ್ಲಿ ಎರಡರಿಂದ ನಾಲ್ಕು ಜನರಿಗೆ ಪ್ರವೇಶ ಕಲ್ಪಿಸಲಾಗಿದೆ. id='are-slot-1' class='oiad oi-axt oiadv'> id='top-searched-articles'>ಪಾಸು
ಮತ್ತು ಇತರ ಮಾಹಿತಿಗಾಗಿ ದೂರವಾಣಿ ಸಂಖ್ಯೆ 98453 75182 ಸಂಪರ್ಕಿಸ ಬಹುದಾಗಿದೆ.











Click it and Unblock the Notifications