ಮಾ.8ಕ್ಕೆ ಮಹಿಳಾ ಮಸೂದೆ ಮಂಡನೆ
ನವದೆಹಲಿ,
ಮಾ. 5 : ಮಾರ್ಚ್ 8 ರಂದು ಅಂತಾರಾಷ್ಟ್ರೀಯ ಮಹಿಳೆಯರ ದಿನ, ಆ ದಿನದಂದು ರಾಜ್ಯಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸಲಾಗುವುದು ಎಂದು ಕೇಂದ್ರದ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಫೃಥ್ವಿರಾಜ್ ಚೌಹಾಣ್ ಹೇಳಿದ್ದಾರೆ. id="toptextpromo"> ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೇಂದ್ರದ ಯುಪಿಎ ಸರಕಾರ ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿ ನೀಡಲು ಸಂಪೂರ್ಣ ತಯಾರಿ ನಡೆಸಿದೆ. ಮಾರ್ಚ್ 8ರಂದು ರಾಜ್ಯಸಭೆಯಲ್ಲಿ ಅಧಿಕೃತವಾಗಿ ಮಂಡಿಸಲಾಗುವುದು ಎಂದರು. ಮಹಿಳಾ ಮಸೂದೆ ಕಳೆದ 13 ವರ್ಷಗಳಿಂದ ನೆನೆಗುದಿದೆ ಬಿದ್ದಿದೆ. ಆದರೆ, ಪ್ರಸ್ತುತ ಕಾಂಗ್ರೆಸ್ ನೇತೃತ್ವದ ಕಾಂಗ್ರೆಸ್ ಸರಕಾರ ಮಹಿಳೆಯರ ದಿನದಂದೇ ಮಹಿಳಾ ಮೀಸಲಾತಿ ತರಲು ಸಿದ್ಧತೆ ನಡೆಸಿದೆ ಎಂದರು. id='are-slot-1' class='oiad oi-axt oiadv'> id='top-searched-articles'> 1996ರಲ್ಲಿ ಎಚ್ ಡಿ ದೇವೇಗೌಡ ಪ್ರಧಾನಮಂತ್ರಿಯಾಗಿದ್ದಾಗಲೇ ಶೇ.33 ರಷ್ಟು ಮಹಿಳಾ ಮೀಸಲಾತಿ ಮಸೂದೆಯನ್ನು ಜಾರಿಗೆ ತರಬೇಕು ಎಂದು ಮೊದಲು ಸಂಸತ್ತಿನಲ್ಲಿ ಪ್ರಸ್ತಾಪಿಸಲಾಗಿತ್ತು. ಆನಂತರ ವಿವಿಧ ಕಾರಣಗಳಿಂದ ಮಸೂದೆ ಜಾರಿಗೆ ಬಂದಿರಲಿಲ್ಲ. ಮಹಿಳಾ ಮಸೂದೆಗೆ ಕಾಂಗ್ರೆಸ್, ಬಿಜೆಪಿ ಹಾಗೂ ಎಡಪಕ್ಷಗಳು ಬೆಂಬಲಿಸಿದ್ದರೆ, ಸಮಾಜವಾದಿ ಪಕ್ಷ, ರಾಷ್ಟ್ರೀಯ ಜನತಾ ದಳ, ಆರ್ ಜೆಡಿ ಪಕ್ಷಗಳು ವಿರೋಧ ವ್ಯಕ್ತಪಡಿಸಿವೆ.











Click it and Unblock the Notifications