ಬಿಎಸ್ಸೆನ್ನೆಲ್, 1 ಲಕ್ಷ ನೌಕರರಿಗೆ ಕೊಕ್ ?
ನವದೆಹಲಿ,
ಮಾ. 5 : ಸ್ಯಾಮ್ ಪಿತ್ರೋಡಾ ನೇತೃತ್ವದ ಉನ್ನತ ಸಮಿತಿ ಬಿಎಸ್ಎನ್ಎಲ್ ಪುನರುಜ್ಜೀವನಕ್ಕೆ ಸಂಬಂಧಿಸಿದಂತ ವರದಿಯನ್ನು ಸರಕಾರಕ್ಕೆ ಸಲ್ಲಿಸಿದೆ. ಸಂಸ್ಥೆಯಲ್ಲಿ ಅಗತ್ಯಕ್ಕಿಂತ ಒಂದು ಲಕ್ಷ ಹೆಚ್ಚುವರಿ ನೌಕರರಿದ್ದಾರೆ. ಇವರನ್ನು ವಜಾಗೊಳಿಸಬೇಕು ಎಂಬ ಸಲಹೆಯನ್ನು ಮುಂದಿಟ್ಟಿದೆ. id="toptextpromo"> 15 ಸಲಹೆಗಳನ್ನು ಹೊಂದಿರುವ ಅಧ್ಯಯನ ವರದಿಯನ್ನು ಪ್ರಧಾನಮಂತ್ರಿಗಳಿಗೆ ಸಲ್ಲಿಸಿದ್ದೇನೆ. ಬಿಎಸ್ಎಲ್ಎನ್ ಆಡಳಿತ ಮಂಡಳಿ ಸುಧಾರಣೆಗೆ ಸಂಬಂಧಿಸಿದಂತೆ ಚರ್ಚೆ ಸಮಾಲೋಚನೆ ನಡೆಸಿ ದೂರಸಂಪರ್ಕ ಇಲಾಖೆ ಸಹಯೋಗದೊಂದಿಗೆ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪಿತ್ರೋಡಾ ಹೇಳಿದ್ದಾರೆ. id='are-slot-1' class='oiad oi-axt oiadv'> id='top-searched-articles'> ಬಿಎಸ್ಎನ್ಎಲ್ ಆದಾಯದ ಕುಸಿತದ ಅದ್ಯಯನಕ್ಕೆ ಸಂಬಂಧಿಸಿದಂತೆ ಸರಕಾರ ಈ ಸಮಿತಿಯನ್ನು ರಚಿಸಿತ್ತು. ಬಿಎಸ್ಎನ್ಎಲ್, ರೈಲ್ವೆ ಇಲಾಖೆ ನಂತರ ಹೆಚ್ಚು ನೌಕರರನ್ನು ಹೊಂದಿರುವ ಸರಕಾರಿ ನಿವೃತ್ತಿ ಸಂಸ್ಥೆಯಾಗಿದೆ. 1 ಲಕ್ಷ ನೌಕರರಿಗೆ ನಿವೃತ್ತಿ ಯೋಜನೆಯಡಿ ನೌಕರರ ಪ್ರಮಾಣ ತಗ್ಗಿಸುವುದು ಉತ್ತಮ ಎಂದು ಸಮಿತಿಯ ವರದಿ ಹೇಳಿದೆ.











Click it and Unblock the Notifications