ಮಧುಮೇಹಿಗಳೆ ಈ ಮಾತ್ರೆ ಸೇವಿಸಬೇಡಿ

ಈ ಮಾತ್ರೆಯಲ್ಲಿ ರೋಸಿಗ್ಲಿಟಾಜೋನ್ ಎಂಬ ಅಂಶ ಮಾರಕವಾಗಿದ್ದು, ಇದರಿಂದ ಹೃದಯ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ ಎಂದು ಹೇಳಲಾಗಿದೆ. ಗ್ಲಾಕ್ಸೋಸ್ಮಿತ್ ಕ್ಲೈನ್ ಎಂಬ ಕಂಪನಿಯ ವಿಂಡಾಮಿಟ್ ಮತ್ತು ವಿಂಡಿಯಾ ಹೆಸರಿನಲ್ಲಿ ಈ ಮಾತ್ರೆಯನ್ನು ಭಾರತದಲ್ಲಿ ಮಾರಾಟ ಮಾಡುತ್ತಿದೆ. ಇದರಲ್ಲೂ ರೋಸಿಗ್ಲಿಟಾಜೋನ್ ಇರುವುದು ಪತ್ತೆಯಾಗಿದೆ. ಅವಾಂಡಿಯಾ ಎಂಬ ಮಾತ್ರೆ ಸೇವಿಸಿದರೆ ಹೃದಯಾಘಾತ ಹಾಗೂ ಹೃದಯ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಳ್ಳಲಿವೆ ಎಂದು ಅಮೆರಿಕ ಸೆನೆಟ್ ತಿಳಿಸಿದೆ. ಈ ಮಾತ್ರೆಯಿಂದ 500 ಕ್ಕೂ ಜನರು ಹೃದಯರೋಗದಿಂದ ಸಾವನ್ನಪ್ಪಿದ್ದಾರೆ.












Click it and Unblock the Notifications