ಸರ್ಕಾರಿ ನೌಕರರಿಗೆ 'ಬಸ್ ದಿನ' ಕಡ್ಡಾಯ
ಬೆಂಗಳೂರು,
ಫೆ.22: ಇನ್ನು ಮುಂದೆ ಸರಕಾರಿ ನೌಕರರು ತಿಂಗಳಿಗೊಮ್ಮೆ ತಮ್ಮ ಸ್ವಂತ ವಾಹನ ಬಿಟ್ಟು ಬಿಎಂಟಿಸಿ ಬಸ್ ನಲ್ಲಿ ಸಂಚರಿಸಬೇಕು. ಸರಕಾರಿ ನೌಕರರ 'ಬಸ್ ದಿನ' ಆಚರಿಸಲು ಸಿದ್ಧತೆ ನಡೆಯುತ್ತಿದೆ. id="toptextpromo">ಬಸ್
ದಿನದ ಮೊದಲ ಪ್ರಯತ್ನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಸರಕಾರಿ ನೌಕರರು ತಿಂಗಳಿಗೊಮ್ಮೆ ಬಸ್ ನಲ್ಲಿ ಸಂಚರಿಸಲು ಮುಖ್ಯ ಕಾರ್ಯದರ್ಶಿಗಳನ್ನು ಕೋರಲಾಗಿದೆ ಎಂದು ಸಾರಿಗೆ ಸಚಿವ ಆರ್ ಅಶೋಕ್ ತಿಳಿಸಿದ್ದಾರೆ. ಬಿಟಿಎಂ ಬಡಾವಣೆ ಮತ್ತು ಬಿಐಎಎಲ್ ನಡುವೆ ಹೊಸದಾಗಿ ಆರಂಭವಾಗಿರುವ ಅಲ್ಟ್ರಾ ಲಕ್ಸುರಿ ಮಿನಿ ಬಸ್ ಗೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು. id='are-slot-1' class='oiad oi-axt oiadv'> id='top-searched-articles'>ಮುಂದಿನ
'ಬಸ್ ದಿನಾಚರಣೆ'(ಮಾರ್ಚ್ 4)ಗೆ ಓಲ್ಡ್ ಮದ್ರಾಸ್ ರಸ್ತೆ, ಬನ್ನೇರುಘಟ್ಟ ರಸ್ತೆ, ಹೊಸೂರು ರಸ್ತೆ ಮತ್ತು ಸರ್ಜಾಪುರ ರಸ್ತೆ ಮಾರ್ಗಗಗಳಲ್ಲಿ ಹೆಚ್ಚುವರಿ ಬಸ್ ಗಳನ್ನು ಕಲ್ಪಿಸಲಾಗುತ್ತದೆ ಎಂದು ಅಶೋಕ್ ತಿಳಿಸಿದರು. ಸರಕಾರಿ ನೌಕರರು ತಿಂಗಳಿಗೊಮ್ಮೆ ಬಸ್ ನಲ್ಲಿ ಓಡಾಡಬೇಕು ಎಂಬ ಬಗ್ಗೆ ಮುಖ್ಯ ಕಾರ್ಯದರ್ಶಿ ಜತೆ ಮಾತುಕತೆ ನಡೆಸಲಾಗಿದೆ. ಸದ್ಯದಲ್ಲೇ ಈ ಕುರಿತು ಸರಕಾರಿ ಆದೇಶ ಹೊರಬೀಳಲಿದೆ ಎಂದರು.











Click it and Unblock the Notifications