ಮಾ.1 ರಿಂದ ಕೆಎಂಎಫ್ ಹಾಲು 2 ರುಪಾಯಿ ತುಟ್ಟಿ
ಬೆಂಗಳೂರು,
ಫೆ. 18 : ಪ್ರತಿ ಲೀಟರ್ ಹಾಲು ಉತ್ಪಾದನಾ ವೆಚ್ಚ 15.97 ರುಪಾಯಿ ಆಗುತ್ತಿದ್ದು, ಮಾರ್ಚ್ ನಿಂದ ನಂದಿನಿ ಹಾಲಿನ ದರ ಪ್ರತಿ ಲೀಟರ್ ಗೆ 2 ರುಪಾಯಿ ಹೆಚ್ಚಳ ಮಾಡುವುದು ಅನಿವಾರ್ಯ ಎಂದು ಕೆಎಂಎಫ್ ಅಧ್ಯಕ್ಷ ಸೋಮಶೇಖರರೆಡ್ಡಿ ಹೇಳಿದ್ದಾರೆ. id="toptextpromo">ಕೆಎಂಎಫ್
ನ ವ್ಯವಸ್ಥಾಪಕ ನಿರ್ದೇಶಕರು, ಮಾರುಕಟ್ಟೆ ವ್ಯವಸ್ಥಾಪಕರು ಚರ್ಚಿಸಿ ಹಾಲಿನ ದರವನ್ನು ತಲಾ ಪ್ರತಿ ಲೀಟರ್ ಗೆ 3-4 ರುಪಾಯಿ ಹೆಚ್ಚಿಸಬೇಕು ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಈ ಪ್ರಸ್ತಾಪವನ್ನೂ ಮುಖ್ಯಮಂತ್ರಿಯವರಿಗೂ ಸಲ್ಲಿಸಲಾಗಿದೆ. ಅದು ಅವರಿಗೆ ತಲುಪಿದೆಯೋ ಇಲ್ಲವೋ ಗೊತ್ತಿಲ್ಲ. ಫೆ. 20 ರಂದು ಕೆಎಂಎಫ್ ಆಡಳಿತ ಮಂಡಳಿ ಜೊತೆ ಚರ್ಚಿಸಲು ಸಿಎಂ ಸಮಯ ನಿಗದಿಪಡಿಸಿದ್ದಾರೆ. ಚರ್ಚೆ ನಂತರ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ರೆಡ್ಡಿ ವಿವರಿಸಿದರು. id='are-slot-1' class='oiad oi-axt oiadv'> id='top-searched-articles'>ಒಂದು
ಲೀಟರ್ ಹಾಲಿನ ಉತ್ಪಾದನಾ ವೆಚ್ಚ 15.97 ರುಪಾಯಿ ಆಗಿದೆ. ಸಹಕಾರ ಸಂಘಗಳ ವತಿಯಿಂದ 13,60 ರುಪಾಯಿ ನೀಡಿ ಖರೀದಿಸಲಾಗುತ್ತಿದ್ದು, ಸರಕಾರದ ವತಿಯಿಂದ 2 ರುಪಾಯಿ ಸಹಾಯಧನ ನೀಡಲಾಗುತ್ತಿದೆ. ಹಾಗಿದ್ದೂ ಹೈನುಗಾರರಿಗೆ 40 ಪೈಸೆಯಷ್ಟು ನಷ್ಟ ಸಂಭವಿಸುತ್ತಿದೆ. ಇದನ್ನು ಸರಿದೂಗಿಸಲು ಹಾಲಿನ ದರವನ್ನು ಕನಿಷ್ಠ 2 ರುಪಾಯಿಗಳಷ್ಟು ಏರಿಸುವುದು ಅನಿವಾರ್ಯ ಎಂದು ಅವರು ಹೇಳಿದರು.











Click it and Unblock the Notifications