ಸಿಇಟಿ ಶುಲ್ಕ ಹೆಚ್ಚಳಕ್ಕೆ ಅಸಮಾಧಾನ

ಕಳೆದ ವರ್ಷ ಸಿಇಟಿ ಬರೆಯಲು ಸಾಮಾನ್ಯ ವರ್ಗಕ್ಕೆ 500 ರುಪಾಯಿ ಇತ್ತು. ಪರಿಶಿಷ್ಟಜಾತಿ, ಪಂಗಡ ಮತ್ತು ಒಂದನೇ ಕೆಟಗರಿ ವಿದ್ಯಾರ್ಥಿಗಳಿಗೆ 400 ರುಪಾಯಿ ಶುಲ್ಕವಿತ್ತು. ಈಗ 650 ರುಪಾಯಿ ಮತ್ತು 500 ರುಪಾಯಿಗೆ ಹೆಚ್ಚಿಸಲಾಗಿದೆ. ಪಿಯು ವಾರ್ಷಿಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ, 180 ರುಪಾಯಿ ಶುಲ್ಕ ವಿಧಿಸಲಾಗಿದೆ. ಎಸ್ ಎಸ್ಟಿಗಳಿಗೆ 20 ರುಪಾಯಿ ಪಿಯು ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆ ಮತ್ತು ಉತ್ತರ ಪತ್ರಿಕೆಗಳನ್ನು ಕೊಡಲಾಗುತ್ತಿದೆ. ಸಿಇಟಿಗೆ ನಾಲ್ಕು ಬುಕ್ ಲೆಟ್ ಮತ್ತು ಒಂದು ಒಎಂಆರ್ ಸೀಟ ಕೊಡುತ್ತಾರೆ. ಇದಕ್ಕೆ ಅಂದಾಜು 300 ರುಪಾಯಿ ವೆಚ್ಚ ಆಗಬಹುದು. ಹೀಗಿರುವಾಗ ಶುಲ್ಕ ಹೆಚ್ಚಳಕ್ಕೆ ಕಾರಣವೇನು ಎಂದು ವಿದ್ಯಾರ್ಥಿಗಳ ಪ್ರಶ್ನೆಯಾಗಿದೆ.












Click it and Unblock the Notifications