ವೃತ್ತಿಪರ ಶಿಕ್ಷಣಕ್ಕೆ ಏಕರೂಪ ಸಿಇಟಿ, ಸಿಬಲ್
ನವದೆಹಲಿ,
ಫೆ. 17 : ದೇಶದ ಎಲ್ಲ ವೃತ್ತಿಪರ ಶಿಕ್ಷಣ ಸಂಸ್ಥೆಗಳ ಪ್ರವೇಶಕ್ಕೂ ರಾಷ್ಟ್ರಮಟ್ಟದಲ್ಲಿ ಏಕರೀತಿ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಲು ಕೇಂದ್ರ ಸರಕಾರ ನಿರ್ಧರಿಸಿದೆ. id="toptextpromo">ಇದರಿಂದ
ವೈದ್ಯಕೀಯ, ಇಂಜಿನಿಯರಿಂಗ್, ವಾಣಿಜ್ಯದಂತಹ ವಿಭಾಗಗಳಿಗೆ ಪ್ರತ್ಯೇಕವಾದ ಏಕೈಕ ಪ್ರವೇಶ ಪರೀಕ್ಷೆ ಇರಲಿದೆ. ಅಂದರೆ ಎಲ್ಲಾ ವೈದ್ಯಕೀಯ ಕೋರ್ಸ್ ಗಳಿಗೂ ಒಂದೇ ಪ್ರವೇಶ ಪರೀಕ್ಷೆ ಅನ್ವಯವಾದರೆ, ಎಲ್ಲಾ ಎಂಜನಿಯರಿಂಗ್ ಕೋರ್ಸ್ ಗಳ ಪ್ರವೇಶ ಮತ್ತೊಂದು ಸಾಮಾನ್ಯ ಪ್ರವೇಶ ಪರೀಕ್ಷೆ ಮೂಲಕ ನಡೆಯುತ್ತದೆ. ಈ ಹೊಸ ವ್ಯವಸ್ಥೆ 2013 ರ ಹೊತ್ತಿಗೆ ಜಾರಿಗೆ ಬರಲಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಸಚಿವ ಕಪಿಲ್ ಸಿಬಲ್ ಸ್ಪಷ್ಟಪಡಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಅಮೆರಿಕದಲ್ಲಿ
ಜಾರಿಯಲ್ಲಿರುವ ಎಸ್ ಐಟಿ ಮಾದರಿಯಲ್ಲಿ ಅಖಿಲ ಭಾರತ ಮಟ್ಟದ ಸಿಇಟಿ ಇರುತ್ತದೆ. ಹೊಸ ಕ್ರಮದಿಂದ ವಿವಿಧ ಕೋರ್ಸ್ ಗಳಿಗೆ ಪ್ರವೇಶ ಸುಲಭವಾಗುತ್ತದೆ. ವಿದ್ಯಾರ್ಥಿಗಳು ಬೇರೆ ಬೇರೆ ಪ್ರವೇಶ ಪರೀಕ್ಷೆ ಬರೆಯುವುದು ತಪ್ಪುತ್ತದೆ ಎಂದು ಸಿಬಲ್ ವಿವರಿಸಿದರು.











Click it and Unblock the Notifications