ಶ್ರೀಲಂಕಾದ ಮಾಜಿ ಸೇನಾ ಅಧ್ಯಕ್ಷ ಬಂಧನ
ಕೊಲಂಬೋ,
ಫೆ. 9 : ಶ್ರೀಲಂಕಾದ ಮಾಜಿ ಸೇನಾ ಅಧ್ಯಕ್ಷ ಮತ್ತು ಅಧ್ಯಕ್ಷೀಯ ಚುನಾವಣೆಯ ಪರಾಜಿತ ಅಭ್ಯರ್ಥಿ ಶರತ್ ಫೋನ್ಸೇಕಾ ಅವರನ್ನು ಸೋಮವಾರ (ಫೆ.8) ತಡರಾತ್ರಿ ಬಂಧಿಸಲಾಗಿದೆ. ಫೋನ್ಸೇಕಾ ಮಿಲಿಟರಿ ಅಪರಾಧವೆಸಗಿದ್ದಾರೆಂದು ಆರೋಪಿಸಲಾಗಿದ್ದು ಅವರನ್ನು ಅತ್ಯಂತ ಅಮಾನವೀಯ ರೀತಿಯಲ್ಲಿ ಬಂಧಿಸಿ ಎಳೆದೊಯ್ಯಲಾಯಿತೆಂದು ಪ್ರತ್ಯಕ್ಷದರ್ಶಿಗಳ ವರದಿಯನ್ನಾಧಾರಿಸಿ ರಾಯ್ಟಾರ್ ಸುದ್ದಿ ಸಂಸ್ಥೆ ವರದಿ ಮಾಡಿದೆ. id="toptextpromo">ಫೋನ್ಸೇಕಾ
ಅವರನ್ನು ಸೇನಾ ಕಾಯ್ದೆಯಡಿಯಲ್ಲಿ ಕೋರ್ಟ್ ಮಾರ್ಷಲ್ ನಲ್ಲಿ ವಿಚಾರಣೆ ನಡೆಸಲಾಗುವುದೆಂದು ಭದ್ರತಾ ಪಡೆಯ ನಿರ್ದೇಶಕರು ತಿಳಿಸಿದ್ದಾರೆ. ಫೋನ್ಸೇಕಾ ಅವರನ್ನು ನಮ್ಮ ಕಣ್ಣ ಮುಂದೆಯೇ ಅಗೌರವಯುತವಾಗಿ ದರದರನೆ ಎಳೆದೊಯ್ಯಲಾಯಿತೆಂದು ಶ್ರೀಲಂಕಾ ಮುಸ್ಲಿಂ ಕಾಂಗ್ರೆಸ್ ನಾಯಕ ರವೂಫ್ ಹಕೀಮ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಇತ್ತೀಚಿಗೆ
ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದ ಫೋನ್ಸೇಕಾ, ರಾಜಪಕ್ಷೆಯವರನ್ನು ಹತ್ಯೆಗೈಯ್ಯಲು ಸಂಚು ರೂಪಿಸಿದ್ದರೆಂದು ಹೇಳಲಾಗುತ್ತಿದ್ದು , ಫೋನ್ಸೇಕಾ ಸೇರಿದಂತೆ 13 ಸೇನಾ ನಿವೃತ್ತ ಅಧಿಕಾರಿಗಳನ್ನು ಕೂಡಾ ಬಂಧಿಸಲಾಗಿದೆ.











Click it and Unblock the Notifications