ಕೆಎಲ್ ಇ ಸಂಸ್ಥೆಗೆ ಮತ್ತೆ ಕೋರೆ ಕಾರ್ಯಾಧ್ಯಕ್ಷ
ಬೆಳಗಾವಿ,
ಫೆ. 8: ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರಾಗಿ ರಾಜ್ಯಸಭೆ ಸದಸ್ಯ ಡಾ.ಪ್ರಭಾಕರ ಕೋರೆ 6ನೇ ಬಾರಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಕಳೆದ ತಿಂಗಳು ಆಯ್ಕೆಯಾದ ಆಡಳಿತ ಮಂಡಳಿಯ ನೂತನ ಸದಸ್ಯರು ಭಾನುವಾರ ಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಸಭೆ ಸೇರಿ ಈ ಆಯ್ಕೆ ಮಾಡಿದರು. ಆಡಳಿತ ಮಂಡಳಿಗೆ ಸೇರ್ಪಡೆಯಾದ ಹೊಸ ಸದಸ್ಯರಲ್ಲಿ ಪ್ರಭಾಕರ್ ಕೋರೆ ಅವರ ಮಗ ಅಮಿತ್ ಕೋರೆ ಅವರು ಹೊಸಬರು. id="toptextpromo">ಕಾರ್ಯಾಧ್ಯಕ್ಷ
ಸ್ಥಾನಕ್ಕೆ ಡಾ.ಪ್ರಭಾಕರ ಕೋರೆ ಅವರ ಹೆಸರನ್ನು ಡಾ.ವಿರುಪಾಕ್ಷಿ ಸಾಧುನವರ ಸೂಚಿಸಿದರು. ಶಾಸಕ ಮತ್ತು ಸಂಸ್ಥೆಯ ನಿರ್ದೇಶಕ ಮಹಾಂತೇಶ ಕವಟಗಿಮಠ ಅನುಮೋದಿಸಿದರು. ಅಶೋಕ ಬಾಗೇವಾಡಿ ಸಂಸ್ಥೆಯ ಉಪ ಕಾರ್ಯಾಧ್ಯಕ್ಷರೆಂದು ಸರ್ವಾನುಮತದಿಂದ ಆಯ್ಕೆಗೊಂಡಿದ್ದಾರೆ. ಅಧ್ಯಕ್ಷರಾಗಿ ಶಿವಾನಂದ ಕೌಜಲಗಿ ಈಗಾಗಲೇ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಕಾರ್ಯಾಧ್ಯಕ್ಷ ಸ್ಥಾನಕ್ಕೆ ಅಶೋಕ ಬಾಗೇವಾಡಿಯವರ ಹೆಸರನ್ನು ಬಿ.ಆರ್. ಪಾಟೀಲ್ (ಕುಮಟೊಳ್ಳಿ) ಸೂಚಿಸಿದರು. ಅನಿಲ್ ಪಟ್ಟೇದ ಅನುಮೋದಿಸಿದರು. ನಿರ್ದೇಶಕ ಶಂಕರಣ್ಣ ಮುನವಳ್ಳಿ ಅವರ ಅಧ್ಯಕ್ಷತೆ ಯಲ್ಲಿ ಸಭೆ ನಡೆಯಿತು. ಸಂಸ್ಥೆಯ ಕಾರ್ಯದರ್ಶಿ ಎಸ್.ಎಸ್. ಉರಬಿನವರ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. id='are-slot-1' class='oiad oi-axt oiadv'> id='top-searched-articles'>ಚುನಾವಣೆ
ಪ್ರಕ್ರಿಯೆ ಬಳಿಕ ಆಗಮಿಸಿದ ಸಂಸ್ಥೆಯ ಅಧ್ಯಕ್ಷ ಶಿವಾನಂದ ಕೌಜಲಗಿ ಅವರು ಕಾರ್ಯಾಧ್ಯಕ್ಷ ಮತ್ತು ಉಪಕಾರ್ಯಾಧ್ಯಕ್ಷರನ್ನು ಅಭಿನಂದಿಸಿದರು. ಕೆಎಲ್‌ಇ 12,000ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿ ಪ್ರಜಾಸತ್ತಾತ್ಮಕ ತಳಹದಿಯ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಬೃಹತ್ ಸಂಸ್ಥೆಯಾಗಿದೆ. 210 ಅಂಗ ಸಂಸ್ಥೆಗಳಿವೆ. ಶೈಕ್ಷಣಿಕ ಮತ್ತು ಆರೋಗ್ಯ ಸೇವಾ ಕ್ಷೇತ್ರಗಳಲ್ಲಿ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದೆ.











Click it and Unblock the Notifications