ಒಬಾಮಾ ಸಮಿತಿ ಸೇರಿದ ಸಾಹಿತಿ ಲಹಿರಿ
ವಾಷಿಂಗ್ಟನ್,
ಫೆ.6:ಬರಾಕ್ ಒಬಾಮಾ ಆಡಳಿತ ಕಚೇರಿಗೆ ಮತ್ತೊಬ್ಬ ಭಾರತೀಯ ಮೂಲದ ಪ್ರತಿಭಾವಂತೆಯ ಪ್ರವೇಶ ಖಚಿತವಾಗಿದೆ. ಅಂಗ್ಲ ಸಾಹಿತಿ ಝಂಪಾ ಲಹಿರಿ (ನೀಲಾಂಜನ ಸುದೇಷ್ಣಾ) ಅವರು ಕಲೆ ಹಾಗೂ ಮಾನವೀಯತೆ ಸಮಿತಿಗೆ ಸೇರಲಿದ್ದಾರೆ. ಲಹಿರಿ ಸೇರಿದಂತೆ ಐದು ಜನ ಈ ಸಮಿತಿಯಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ. id="toptextpromo">ಝಂಪಾ
ಲಹಿರಿ, ಚಕ್ ಕ್ಲೋಸ್, ಫ್ರೆಡ್ ಗೋಲ್ಡ್ ರಿಂಗ್, ಶೈಲಾ ಜಾನ್ಸನ್, ಪಮೇಲಾ ಜೊಯ್ನರ್ ಹಾಗೂ ಕೆನ್ ಸೋಲೊಮನ್ ಈ ಸಮಿತಿಯಲ್ಲಿದ್ದಾರೆ. ಪುಲಿಟ್ಜರ್ ವಿಜೇತ ಝಂಪಾ ಲಹಿರಿ ಅವರ ಇಂಟರ್ ಪ್ರಿಟರ್ ಆಫ್ ಮಲಾಡೀಸ್ ಹಾಗೂ ನೇಮ್ ಸೇಕ್ ಕೃತಿಗಳು ಜನಪ್ರಿಯತೆ ಜತೆಗೆ ಹಲವಾರು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ತಂದು ಕೊಟ್ಟಿವೆ. ಅನ್ ಅಕಸ್ಟೋಮ್ಡ್ ಅರ್ಥ್ ಇವರ ಇತ್ತೀಚಿನ ಕೃತಿ. ನೇಮ್ ಸೇಕ್ ಕೃತಿ ಆಧರಿಸಿ ಚಲನಚಿತ್ರವನ್ನು ಮೀರಾ ನಾಯರ್ ಅವರು ಬೆಳ್ಳಿತೆರೆಗೆ ತಂದಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಪುಲಿಟ್ಜರ್
ಅಲ್ಲದೆ PEN ಪ್ರಶಸ್ತಿ, ಹೆಮ್ಮಿಂಗ್ವೇ ಪ್ರಶಸ್ತಿ, ನ್ಯೂಯಾರ್ಕ್ ಮ್ಯಾಗಜೀನ್ ಪ್ರಶಸ್ತಿ,ಯುಎಸ್ ಎ ಟುಡೇ ಇಂದ ವರ್ಷದ ಪುಸ್ತಕ(ನೇಮ್ ಸೇಕ್), ಫ್ರಾಂಕ್ ಓ'ಕಾರ್ನರ್ ಅಂತಾರಾಷ್ಟ್ರೀಯ ಸಣ್ಣಕಥೆಗಳ ಪ್ರಶಸ್ತಿ, ವಲ್ಲೊಬ್ರೊಸಾ ಗ್ರೆಗೋರ್ ವಾನ್ ರೆಜ್ಜೋರಿ ಪ್ರಶಸ್ತಿ ಮುಂತಾದ ಪುರಸ್ಕಾರಗಳಿಗೆ ಲಹಿರಿ ಪಾತ್ರರಾಗಿದ್ದಾರೆ.











Click it and Unblock the Notifications