ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ಕರೆಯೋಲೆ

ಸಕಲ ಭಕ್ತರು ಜಾತ್ರೆಗೆ ಆಗಮಿಸಿ, ಉತ್ಸವದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಯಾಗಿಯೂ ಸಾಂಗವಾಗಿಯೂ ನೆರವೇರುವಂತೆ ಸಹಕರಿಸಿ, ಸರ್ವಾಭೀಷ್ಟಪ್ರದಾಯಕಳಾದ ಶ್ರೀ ಮಾರಿಕಾಂಬಾ ದೇವಿಯ ಕೃಪಾನುಗ್ರಹಕ್ಕೆ ಪಾತ್ರರಾಗಬೇಕಾಗಿ ವಿನಂತಿ.
ಜಾತ್ರಾ ಕಾರ್ಯಕ್ರಮಗಳು : ಮೊದಲದಿನ ಮಂಗಳವಾರ ಸರ್ವಾಲಂಕಾರ ಭೂಷಿತೆ ಶ್ರೀ ಮಾರಿಕಾಂಬಾ ದೇವಿಯ ಕಲ್ಯಾಣ ಪ್ರತಿಷ್ಠೆ. ಬುಧವಾರ, ಶ್ರೀ ದೇವಿಯ ರಥಾರೋಹಣ. ಗುರುವಾರದಿಂದ ಮಂಗಳವಾರದವರೆಗೆ ನಾನಾ ಸೇವೆಗಳ ಪ್ರಾರಂಭ. ಹಣ್ಣು ಕಾಯಿ, ಕಾಣಿಕೆ, ಹರಕೆ, ತುಲಾಭಾರ ವಗೈರೆ ಸೇವೆಗಳನ್ನು ಸ್ವೀಕರಿಸಲಾಗುವುದು. ಮಾರ್ಚ್ 3ರ ಬುಧವಾರ ಜಾತ್ರಾ ಮುಕ್ತಾಯ ಕಾರ್ಯಕ್ರಮಗಳು (ಈದಿನ ಬೆಳಗ್ಗೆ 10.35 ಗಂಟೆಯವರೆಗೆ ಮಾತ್ರ ಸೇವೆ ಸ್ವೀಕರಿಸಲಾಗುವುದು)
ಡಿಎಚ್ ಸಾನು ಅಧ್ಯಕ್ಷರು. ಎನ್ ವಿ ನಾಯ್ಕ ಉಪಾಧ್ಯಕ್ಷರು. ಜಿಬಿ ನೇತ್ರಕರ, ಕೇಶವ ವಿ ಹೆಗಡೆ ಶ್ರೀಮತಿ ನಾಗರತ್ನಾ ಶೇಟ್ (ಎಲ್ಲರೂ ಧರ್ಮದರ್ಶಿಗಳು)












Click it and Unblock the Notifications