ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ನೋಕಿಯಾ ಮೊಬೈಲ್ ಗಳು ಅಗ್ಗ
ಹೆಲ್ಸಿಂಕಿ. ಫೆ. 2: ವಿಶ್ವದ ಅಗ್ರಗಣ್ಯ ಮೊಬೈಲ್ ತಂತ್ರಜ್ಞಾನ ಸಂಸ್ಥೆ ನೋಕಿಯಾ ತನ್ನ ಗ್ರಾಹಕರನ್ನು ಕಾಯ್ದುಕೊಳ್ಳಲು, ಮೊಬೈಲ್ ಫೋನ್ ಬೆಲೆ ಇಳಿಕೆ ಮಾಡಲು ನಿರ್ಧರಿಸಿದೆ.ಇತರೆ ಕಂಪನಿಗಳ ಪೈಪೋಟಿ, ಗ್ರಾಹಕರ ಬೇಡಿಕೆಯ ಅನುಸಾರವಾಗಿ ಮೊಬೈಲ್ ಹ್ಯಾಂಡ್ ಸೆಟ್ ಗಳ ಬೆಲೆಗಳನ್ನು ಕಡಿಮೆ ಮಾಡಲಾಗುತ್ತಿದೆ ಎಂದು ನೋಕಿಯಾ ಸಂಸ್ಥೆ ಪ್ರಕಟಣೆಯಲ್ಲಿ ಹೇಳಲಾಗಿದೆ.
ಅಧಿಕೃತ ಮೂಲಗಳ ಪ್ರಕಾರ ಜನವರಿ ಅಂತ್ಯದಿಂದ ಬೆಲೆ ಇಳಿಕೆ ಜಾರಿಗೆ ಬರಲಿದೆ. ಹ್ಯಾಂಡ್ ಸೆಟ್ ಗಳ ಬೆಲೆ ಸುಮಾರು ಶೇ.10 ಬೆಲೆ ಇಳಿಯಲಿದೆ. ಕಳೆದ ಆರ್ಥಿಕ ವರ್ಷದ ಅಕ್ಟೋಬರ್- ಡಿಸೆಂಬರ್ ತ್ರೈಮಾಸಿಕದಲ್ಲಿ ಸ್ಮಾರ್ಟ್ ಫೋನ್ ಗಳ ಹೆಚ್ಚಿನ ಮಾರಾಟದಿಂದ ಶೇ. 26 ರಷ್ಟು ಲಾಭ ಗಳಿಸಿದ ನೋಕಿಯಾ ಸಂಸ್ಥೆ, ಬೆಲೆ ಇಳಿಕೆಯ ಜೊತೆಗೆ ಹೆಚ್ಚಿನ ಸೌಲಭ್ಯಗಳನ್ನು ನೀಡಿ, ಸೋನಿ ಎರಿಕ್ಸನ್, ಸ್ಯಾಮ್ ಸಂಗ್ ಸಂಸ್ಥೆಗಳಿಗೆ ಹೆಚ್ಚಿನ ಪೈಪೋಟಿ ನೀಡಲು ಮುಂದಾಗಿದೆ ಎನ್ನಲಾಗಿದೆ.