ಶಾರುಕ್, ಅಮೀರ್ 2 ಈಡಿಯಟ್ಸ್ : ಶಿವಸೇನೆ

Aamir Khan and Shahrukhan
ಮುಂಬೈ, ಜ. 31 : ಇಂಡಿಯನ್ ಪ್ರೀಮಿಯರ್ ಲೀಗ್ 3ನಲ್ಲಿ ಪಾಕ್ ಆಟಗಾರನೇ ಇರಲಿ ಯಾವುದೇ ರಾಷ್ಟ್ರದ ಆಟಗಾರನಿರಲಿ, ಉತ್ತಮ ಆಟಗಾರನನ್ನು ಸೇರಿಸಿಕೊಳ್ಳಬೇಕೆಂದು ಹೇಳಿಕೆ ನೀಡಿರುವ '3 ಈಡಿಯಟ್ಸ್' ನಾಯಕನಟ ಅಮೀರ್ ಖಾನ್ ಶಿವಸೇನೆಯ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಪಾಕ್ ಆಟಗಾರರ ಪರ ದನಿಯೇರಿಸಿದ್ದ ಬಾಲಿವುಡ್ ನಟ ಶಾರುಕ್ ಖಾನ್ ಮತ್ತು ಅಮೀರ್ ಖಾನ್ ವಿರುದ್ಧ ಶಿವಸೇನೆಯ ಮುಖವಾಣಿ ದೋಪಹರ್ ಕಾ ಸಾಮ್ನಾ ಪತ್ರಿಕೆ ಕೆಂಡ ಕಾರಿದ್ದು, ನಿಜ ಜೀವನದಲ್ಲಿ ಇವರಿಬ್ಬರೂ '2 ಈಡಿಯಟ್ಸ್' ಎಂದು ವ್ಯಂಗ್ಯವಾಡಿದೆ.

ಪಾಕ್ ಆಟಗಾರರನ್ನು ಬೆಂಬಲಿಸಿ ಇಬ್ಬರೂ ಮೂರ್ಖ ಹೇಳಿಕೆ ನೀಡುತ್ತಿದ್ದಾರೆ. ಶಾರುಕ್ ಖಾನ್ ಪಾಕ್ ಆಟಗಾರರನ್ನು ನೇರವಾಗಿ ಬೆಂಬಲಿಸಿದರೆ, ಅಮೀರ್ ಖಾನ್ ರಾಷ್ಟ್ರೀಯ ಭಾವನೆಯನ್ನು ಹಿಂದಿಕ್ಕಿ ಪಾಕ್ ಆಟಗಾರರ ಪರ ಮಾತಾಡಿದ್ದಾರೆ ಎಂದು ಪತ್ರಿಕೆ ಅವರಿಬ್ಬರನ್ನು ಜರಿದಿದೆ.

ಐಪಿಎಲ್ 3ಗಾಗಿ ಆಟಗಾರರನ್ನು ಆಯ್ಕೆ ಮಾಡುವ ಅವಕಾಶ ದೊರೆತಿದ್ದರೆ, ಆಟಗಾರರ ಸಾಧನೆಯ ಆಧಾರದ ಮೇಲೆ ಆಟಗಾರರನ್ನು ಆಯ್ಕೆ ಮಾಡುತ್ತೇನೆಯೇ ಹೊರತು ರಾಷ್ಟ್ರದ ಆಧಾರದ ಮೇಲಲ್ಲ ಎಂದು ಹೇಳಿಕೆ ನೀಡಿದ್ದರು.

ಶಾರುಖ್ ಮನೆ ಎದಿರು ಪ್ರತಿಭಟನೆ : ಶಾರುಕ್ ಖಾನ್ ಮನೆ ಎದಿರು ಪ್ರತಿಭಟನೆ ನಡೆಸುತ್ತಿರುವ 15ಕ್ಕೂ ಹೆಚ್ಚಿನ ಶಿವಸೇನೆ ಕಾರ್ಯಕರ್ತರನ್ನು ಮುಂಬೈ ಪೊಲೀಸರು ಇಂದು ಬಂಧಿಸಿದ್ದಾರೆ. ಪ್ರತಿಭಟನೆ ತೀವ್ರವಾಗುತ್ತಿರುವ ಹಿನ್ನೆಲೆಯಲ್ಲಿ ಶಾರುಕ್ ಖಾನ್ ಮನೆಗೆ ಬಿಗಿಭದ್ರತೆ ನೀಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+