ವಾಹನ ಫ್ಯಾನ್ಸಿ ನಂಬರ್ ಮತ್ತಷ್ಟು ದುಬಾರಿ
ಬೆಂಗಳೂರು,
ಜ.30: ವಾಹನಗಳಿಗೆ ಫ್ಯಾನ್ಸಿ ನಂಬರ್ ಪಡೆಯಬೇಕಾದರೆ ಇನ್ನು ಮುಂದೆ ದುಬಾರಿ ಬೆಲೆ ತೆರಬೇಕಾಗುತ್ತದೆ. ಫ್ಯಾನ್ಸಿ ನಂಬರ್ ಗಳಿಗೆ ಬೇಡಿಕೆ ಹೆಚ್ಚಾದ ಕಾರಣ ಅವುಗಳ ದರ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ಸಾರಿಗೆ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ. id="toptextpromo">ದ್ವಿಚಕ್ರ
ವಾಹನಗಳ ಫ್ಯಾನ್ಸಿ ನಂಬರ್ ಪಡೆಯಬೇಕಾದರೆ ಈ ಹಿಂದೆ ರು.3,000 ಪಾವತಿಸಬೇಕಾಗಿತ್ತು. ಪರಿಷ್ಕರಿಸಿದ ದರಗಳ ಪ್ರಕಾರ ರು.6,000 ಪಾವತಿಸಬೇಕಾಗುತ್ತದೆ. ಕಾರಿನ ಫ್ಯಾನ್ಸಿ ನಂಬರ್ ದರಗಳನ್ನು ರು.6,000 ದಿಂದ ರು.20,000ಕ್ಕೆ ಏರಿಸಲಾಗಿದೆ. ಇತರೆ ವಾಹನಗಳ ಫ್ಯಾನ್ಸಿ ನಂಬರ್ ದರಗಳನ್ನು ರು.9,000ದಿಂದ ರು.30,000ಕ್ಕೆ ಏರಿಸಲಾಗಿದೆ. id='are-slot-1' class='oiad oi-axt oiadv'> id='top-searched-articles'>ಹೊಸ
ಸರಣಿ ನಂಬರ್ ಗಳ ದರಗಳನ್ನು ಪರಿಷ್ಕರಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಫ್ಯಾನ್ಸಿ ನಂಬರ್ ಗಳ ಮಾರಾಟದಿಂದ ಸರಕಾರಕ್ಕೆ ರು.10 ಕೋಟಿ ಆದಾಯ ಬಂದಿದೆ. ಪರಿಷ್ಕರಿಸಿದ ದರಗಳಿಂದ ಸರ್ಕಾರಕ್ಕೆ ಕನಿಷ್ಠ ರು.30 ಕೋಟಿ ಆದಾಯ ಬರುವ ಸಾಧ್ಯತೆ ಇದೆ ಎಂದು ಅಶೋಕ್ ಹೇಳಿದರು.











Click it and Unblock the Notifications