ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೆ. 21 ರಂದು ಬಿಬಿಎಂಪಿ ಚುನಾವಣೆ ಅಸಾಧ್ಯ

By Mahesh
|
Google Oneindia Kannada News

KG Balakrishnan
ನವದೆಹಲಿ, ಜ.28: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಹಿಡಿದ ಗ್ರಹಣಕ್ಕೆ ಇನ್ನೂ ಮೋಕ್ಷ ಕಾಲ ಬಂದಿಲ್ಲ. ಚುನಾವಣೆ ನಡೆಸಲು ಅನುಮತಿ ನೀಡಿದಾಗ, ಕಾಲಾವಕಾಶ ಕೋರುವ ಸರ್ಕಾರ ವಾರ್ಡ್ ಗಳ ಮರುವಿಗಂಡಣೆ, ಮೀಸಲಾತಿ ಪಟ್ಟಿ ಗೊಂದಲ ಪರಿಹಾರ ಮಾಡಲಾಗದೆ ವಿಳಂಬ ನೀತಿ ಅನುಸರಿಸಿದ ಪರಿಣಾಮ ಚುನಾವಣೆಯನ್ನು ಮತ್ತೆ ಮುಂದೂಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಬಿಬಿಎಂಪಿ ಚುನಾವಣೆ ಗೊಂದಲ ಕೋರ್ಟ್ ಸುದ್ದಿ ಸಾರಾಂಶ:
*ಮೀಸಲು ಸಂಬಂಧ ಹೈಕೋರ್ಟ್ ನೀಡಿದ್ದ ಆದೇಶ(ನ್ಯಾ. ವಿ.ಗೋಪಾಲಗೌಡ ವಿಭಾಗೀಯ ಪೀಠ, ಡಿ. 23, 2009ರ ಆದೇಶ)ವನ್ನು ಸುಪ್ರೀಂಕೋರ್ಟ್ಎತ್ತಿಹಿಡಿದಿದೆ. ಹೊಸ ಮೀಸಲು ಪಟ್ಟಿ ತಯಾರಾಗುವವರೆಗೂ ಚುನಾವಣೆ ಅಸಾಧ್ಯ.
* ಬಿಬಿಎಂಪಿ ಮೀಸಲು ಪ್ರಶ್ನಿಸಿ ವಸುಧಾ ಮತ್ತು ರಮೇಶ್ ಅರ್ಜಿ ಸಲ್ಲಿಕೆ. ಜ. 22 ರಂದು ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠ ದಿಂದ ಅಂಗೀಕಾರ
*ಜ. 27 ರಂದು ನಡೆಯಬೇಕಿದ್ದ ವಿಚಾರಣೆ ಇಂದು ನಡೆಯಿತು. ನ್ಯಾ. ಕೆಜಿ ಬಾಲಕೃಷ್ಣನ್ ನೇತೃತ್ವ ತ್ರಿಸದಸ್ಯ ಪೀಠ ಹೈಕೋರ್ಟ್ ಆದೇಶ ಎತ್ತಿಹಿಡಿದು, ಮೀಸಲು ಬದಲಾವಣೆಗೆ ಕಾಲಾವಕಾಶ ಬೇಕಾದರೆ ಹೈಕೋರ್ಟ್ ಮೊರೆ ಹೋಗಲು ಸರ್ಕಾರಕ್ಕೆ ಅವಕಾಶ.
*ಮೀಸಲಾತಿ ಪಟ್ಟಿ ಪುನ:ಪರಿಷ್ಕರಣೆ ಮಾಡಲು ಕನಿಷ್ಠವೆಂದರೂ 3-4ವಾರಗಳ ಕಾಲಾವಕಾಶ ಬೇಕಾಗುವ ಸಾಧ್ಯತೆಯಿರುವುದರಿಂದ ಫೆ. 21ಕ್ಕೆ ಚುನಾವಣೆ ಅಸಾಧ್ಯ.
*ಮೀಸಲಾತಿ ಪಟ್ಟಿ ತಾರತಮ್ಯದಿಂದ ಕೂಡಿದೆ ಎಂದು ರಮೇಶ್ ಮತ್ತು ಧವನ್ ಸುಪ್ರೀಂಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಪರಿಶಿಷ್ಟ ಜಾತಿ ಹಾಗೂ ಪಂಗಡ ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ನಿಗದಿ ಮಾಡುವಂತೆ ಅರ್ಜಿದಾರರ ಪರ ವಕೀಲ ಶಾಂತಿಭೂಷಣ್ ವಾದ ಮಂಡಿಸಿದರು.

ಕೊನೆಕಿಡಿ: ಮೂರುವರ್ಷಗಳಿಂದ ನೆನೆಗುದಿಯಲ್ಲಿ ಬಿದ್ದಿರುವ ಬಿಬಿಎಂಪಿ ಚುನಾವಣೆ ವ್ಯರ್ಥ ಕಾಲಕ್ಷೇಪದಿಂದ ವರ್ಷದ ಕೊನೆ ತನಕ ಮುಂದೂಡುವ ಸಾಧ್ಯತೆಗಳಿವೆ. ಮಾರ್ಚ್ ನಲ್ಲಿ ಪರೀಕ್ಷೆ ಕಾಲ, ನಂತರ ಮಳೆಗಾಲ,ಮುಂದಿನ ಚಳಿಗಾಲ ತನಕ ಚುನಾವಣೆ ಬಿಸಿ ಇಲ್ಲದೆ ಬಿಬಿಎಂಪಿ ಅಭ್ಯರ್ಥಿಗಳು ನಿರಾಳವಾಗಿರಬಹುದು ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X