ಸೈಬರ್ ಕ್ರೈಂ ಹೆಚ್ಚಳ, ಆತಂಕದಲ್ಲಿ ಜಾಲಿಗರು
ಬೆಂಗಳೂರು
ಜ 28 : ಆನ್ ಲೈನ್ ನಲ್ಲಿ ಭದ್ರತೆ ಒದಗಿಸುವ ವೆರಿಸೈನ್ ಮತ್ತು ಐಎಂಆರ್ ಬಿ ನಡೆಸಿದ ಜಂಟಿ ಸಮೀಕ್ಷೆಯಲ್ಲಿ ಬೆಂಗಳೂರು ಸೇರಿದಂತೆ ದೇಶದ ಹತ್ತು ನಗರಗಳಲ್ಲಿ ಶೇ. 91ರಷ್ಟು ಬಳಕೆದಾರರು ಆನ್ ಲೈನ್ ಭದ್ರತೆ ಮತ್ತು ಸೈಬರ್ ವಂಚನೆಯ ಕುರಿತು ಆತಂಕ ವ್ಯಕ್ತ ಪಡಿಸಿದ್ದಾರೆ. id="toptextpromo">ಗುರುತು
ಕಳವು, ಕೀ ಲಾಕಿಂಗ್, ನಕಲಿ ವೆಬ್ ಸೈಟ್ ಹಾವಳಿ,ಖಾತೆ ಕಳವು ಇತ್ಯಾದಿಗಳು ಸೈಬರ್ ವಿಶ್ವದಲ್ಲಿ ನಡೆಯುತ್ತಿದೆ ಎನ್ನುವ ಅರಿವು ಗ್ರಾಹಕರಿಗಿದೆ. ಆದರೆ ಇವುಗಳ ದುರ್ಬಳಕೆಯನ್ನು ಯಾವ ರೀತಿ ತಡೆಯಬಹುದು ಎನ್ನುವ ಅರಿವು ಬಳಕೆದಾರರಿಗಿಲ್ಲ. ಸಮೀಕ್ಷೆಗಾಗಿ ಸಂದರ್ಶಿಸಿದ ಐದು ಸಾವಿರ ಜನರಲ್ಲಿ ಶೇ. 60ರಷ್ಟು ಜನ ವಾರಕ್ಕೆ ಕನಿಷ್ಠ ಆರು ಬಾರಿ ಇಂಟರ್ ನೆಟ್ ಬಳಸುತ್ತಾರೆ. ಶೇ. 44ರಷ್ಟು ಜನ ಆನ್ ಲೈನ್ ಖರೀದಿಯಲ್ಲಿ ಮತ್ತು ಶೇ. 53ರಷ್ಟು ಮಂದಿ ಸೋಷಿಯಲ್ ನೆಟ್ ವರ್ಕ್, ಬ್ಲಾಗ್ ಗಳಲ್ಲಿ ಮುಳುಗಿರುತ್ತಾರೆ ಎಂದು ತನ್ನ ಸಮೀಕ್ಷೆಯಲ್ಲಿ ತಿಳಿಸಿದೆ. id='are-slot-1' class='oiad oi-axt oiadv'> id='top-searched-articles'>ಶೇ.
38ರಷ್ಟು ಜನ ಒಂದಕ್ಕಿಂತ ಹೆಚ್ಚು ಲಾಗ್ ಇನ್ ಗಳಿಗೆ ಒಂದೇ ಪಾಸ್ ವರ್ಡ್ ಬಳಸುತ್ತಾರೆ. ಶೇ. 11ರಷ್ಟು ಬಳಕೆದಾರರು ಮಾತ್ರ ತಾವು ತೆರೆದ ವೆಬ್ ಸೈಟ್ ಗೆ ಸೆಕ್ಯೂರಿಟಿ ಇದೆಯೇ ಎಂದು ಪರಿಶಿಲಿಸುತ್ತಾರೆ. ಶೇ. 83ರಷ್ಟು ಮಂದಿ ಭದ್ರತೆಯ ಬಗ್ಗೆ ಗಮನ ಹರಿಸುವುದೇ ಇಲ್ಲ ಎಂದು ತನ್ನ ಸಮೀಕ್ಷೆಯಲ್ಲಿ ತಿಳಿಸಿದೆ.











Click it and Unblock the Notifications