ಕುಡಿತ ಯಾಕೆ, ಎರಡನೇ ಬಾರಿ ಸಿಕ್ಕಿಬಿದ್ದೀರಿ ಜೋಕೆ

ಟ್ರಾಫಿಕ್ ನಿಯಮಗಳನ್ನು ಮೇಲಿಂದ ಮೇಲೆ ಗಾಳಿಗೆ ತೂರಿ ಪೊಲೀಸರ ಕಣ್ಣಿಗೆ ಮಣ್ಣೆರಚುವವರನ್ನು ಮಟ್ಟ ಹಾಕಲು ಬ್ಲಾಕ್ ಬೆರ್ರಿ ಮೊಬೈಲನ್ನು ಸೊಂಟದ ಬೆಲ್ಟಿಗೆ ಸಿಕ್ಕಿಸಿಕೊಂಡು ಬೆಂಗಳೂರು ಟ್ರಾಫಿಕ್ ಪೊಲೀಸರು ಸಜ್ಜಾಗುತ್ತಿದ್ದಾರೆ. ನಾಲ್ಕು ನೂರು ಹೆಚ್ಚುವರಿ ಸಬ್ ಇನ್ ಸ್ಪೆಕ್ಟರುಗಳನ್ನು ಸಂಚಾರಿ ಅಪರಾಧವನ್ನು ತಡೆಗಟ್ಟಲು ಪೊಲೀಸ್ ಇಲಾಖೆ ನಿಯೋಜಿಸುತ್ತಿದೆ.
ಕುಡಿದು ವಾಹನ ಓಡಿಸಿ ಸಿಕ್ಕುಬಿದ್ದರೆ ಸೀದಾ ಜೈಲು. ಇನ್ನಿತರ ನಿಯಮಗಳನ್ನು ಉಲ್ಲಂಘಿಸಿದರೆ ಮೂರುಪಟ್ಟು ದಂಡ ತೆತ್ತಬೇಕಾಗುತ್ತದೆ. ಆಧುನಿಕ ತಂತ್ರಜ್ಞಾನದೊಂದಿಗೆ ರಸ್ತೆ ಮೇಲಿಳಿಯಲಿರುವ ಪೊಲೀಸರು ಎರಡನೇ ಬಾರಿ ನಿಯಮ ಉಲ್ಲಂಘಿಸಿದವರನ್ನು ಹ್ಯಾಬಿಚುವಲ್ ಅಫೆಂಡರ್ ಪಟ್ಟಿಗೆ ಸೇರಿಸಿ ಮೂರು ಪಟ್ಟು ದಂಡ ವಸೂಲಿ ಮಾಡಲಿದ್ದಾರೆ. ಇದರ ಕಾರ್ಯಾಚರಣೆ ಇನ್ನು ಒಂದು ವಾರದಲ್ಲಿ ಪ್ರಾರಂಭವಾಗಲಿದೆ.
ನಗರದ 23 ಬೃಹತ್ ಮಾರಾಟ ಮಳಿಗೆಗಳಲ್ಲಿನ ಪಾರ್ಕಿಂಗ್ ಲಭ್ಯತೆ ಪೊಲೀಸ್ ಇಲಾಖೆಯ ವೆಬ್ ಸೈಟ್ ನಲ್ಲಿ ದೊರೆಯಲಿದೆ. ಈ ಶಾಪಿಂಗ್ ಮಾಲ್ ಗಳಲ್ಲಿ ವಾಹನ ನಿಲ್ಲಿಸಲು ಜಾಗ ಇದೆಯೋ ಇಲ್ಲವೋ ಎಂಬುದನ್ನು ಮೊದಲೇ ತಿಳಿಯಲು ಸಾಧ್ಯವಿದೆ.












Click it and Unblock the Notifications