ಹೊಸ ವಿನ್ಯಾಸದ ವಿಡಿಯೋಕಾನ್ ಮೊಬೈಲ್

ವಿವಿಧ ಬಗೆಯ ಆಕರ್ಷಕ ಮೊಬೈಲ್ ಹ್ಯಾಂಡ್ ಸೆಟ್ ಗಳನ್ನು ಹೊಂದುವುದು ಭಾರತೀಯ ಯುವ ಜನಾಂಗದ ಕನಸಾಗಿದೆ. ಅದರಲ್ಲೂ ಕೈಗೆಟಕುವ ದರದಲ್ಲಿ ಡುಯಲ್ ಸಿಮ್ ಸೌಲಭ್ಯವಿರುವ ಹ್ಯಾಂಡ್ ಸೆಟ್ ಗಾಗಿ ಬೇಡಿಕೆ ಹೆಚ್ಚಾಗುತ್ತಿದೆ. ಈಗಾಗಲೇ 12ಕ್ಕೂ ಹೆಚ್ಚು ವಿಡಿಯೋಕಾನ್ ಮೊಬೈಲ್ ಹ್ಯಾಂಡ್ ಸೆಟ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಮುಂಬರುವ ದಿನಗಳಲ್ಲಿ 15 ಕ್ಕೂ ಹೆಚ್ಚು ವಿನ್ಯಾಸಗಳನ್ನು ಹೊರತರಲಾಗುವುದು ಅವುಗಳಲ್ಲಿ ಡುಯಲ್ ಸಿಮ್( ಎರಡು ಬೇರೆ ಬೇರೆ ಸೇವಾ ಸಂಸ್ಥೆಯ ( ಏರ್ ಟೆಲ್ , ಡೊಕೊಮೊ) ಸಿಮ್ ಗಳನ್ನು ಒಂದೇ ಮೊಬೈಲ್ ನಲ್ಲಿ ಉಪಯೋಗಿಸುವ ಸೌಲಭ್ಯ) ಇರುವ ಹ್ಯಾಂಡ್ ಸೆಟ್ ಗಳು ಹೆಚ್ಚಿನ ಸಂಖ್ಯೆಯಲ್ಲಿರುತ್ತವೆ ಎಂದು ವಿಡಿಯೋಕಾನ್ ಸಂಸ್ಥೆಯ ಸಿಒಒ ರಾಹುಲ್ ಗೋಯಲ್ ಹೇಳಿದರು.












Click it and Unblock the Notifications