ನಾಳೆ ಪೂನಾವಾಲಾ ಬೆಂಗಳೂರು ಡರ್ಬಿ

ರೇಸಿಗೆ ಕ್ರೀಡಾಪ್ರಿಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುವ ನಿಟ್ಟಿನಲ್ಲಿ ಕ್ಲಬ್ಬಿನ ಆಡಳಿತ ವರ್ಗವು ಕ್ರೀಡಾಭಿಮಾನಿಗಳಿಗೆ ಉಚಿತ ಕೌಶಲ್ಯ ಸ್ಪರ್ಧೆ ಇಟ್ಟಿದೆ. ಡರ್ಬಿ ಪಂದ್ಯದಲ್ಲಿ ಕ್ರಮವಾಗಿ ಪ್ರಥಮ ನಾಲಕ್ಕು ಸ್ಥಾನಗಳನ್ನು ಪಡೆಯುವ ಕುದುರೆಗಳನ್ನು ಹೆಸರಿಸಿ ಆಕರ್ಷಕ ಬಹುಮಾನಗಳನ್ನು ಗೆಲ್ಲುವ ಅವಕಾಶವನ್ನು ಕಲ್ಪಿಸಲಾಗಿದೆ.
ಬಹುಮಾನಗಳು ಕ್ರಮವಾಗಿ ಮಾರುತಿ ಕಾರು, ಹೀರೋ ಹೋಂಡ ಆಕ್ಟಿವ, ಹೀರೋ ಹೊಂಡ ಪ್ಲೆಷರ್, ಎಲ್ ಜಿ ಎಲ್ ಸಿಡಿ ಟಿವಿ ಹಾಗೂ ಹದಿನೈದು ಸಮಾಧಾನಕರ ಉಡುಗೊರೆಗಳನ್ನು ಕೊಡಲಾಗುತ್ತದೆ ಎಂದು ಬಿಟಿಸಿ ಪ್ರಕಟಣೆ ತಿಳಿಸಿದೆ. ಕ್ಲಬ್ಬಿನ ಆವರಣದಲ್ಲಿ ಪ್ರವೇಶ ಪತ್ರಗಳನ್ನು ಪಡೆದು ಭರ್ತಿ ಮಾಡಿ ಮಂಗಳವಾರ ಸಂಜೆ 4 ಗಂಟೆಯೊಳಗೆ ಡಬ್ಬದೊಳಗೆ ಹಾಕಬೇಕು.
ಇದಲ್ಲದೆ,ಅತ್ಯುತ್ತಮ ಪೋಷಾಕು ಧರಿಸಿದ ಮಹಿಳೆ ಮತ್ತು ಪುರಷನಿಗೆ ಆಕರ್ಷಕ ಗಿಫ್ಟ್ ವೋಚರುಗಳು ಲಭ್ಯವಾಗಲಿವೆ. ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದಕ್ಕೆ ಮೊದಲ ಹತ್ತು ಸಾವಿರ ಪ್ರವೇಶ ಟಿಕೆಟ್ ಪಡೆದವರಿಗೆ ಮಾತ್ರ ಅವಕಾಶ ಇರುತ್ತದೆ.(ಮೊದಲನೆ ಮತ್ತು ಎರಡನೆ ಗೇಟುಗಳಲ್ಲಿ) ಅಧಿಕೃತ ಪ್ರವೇಶ ಪಡೆದವರಿಗೆ 25 ರೂಗಳ ಉಚಿತ ಉಪಾಹಾರ ಕೂಪನ್ನುಗಳನ್ನು ಕೊಡಲಾಗುತ್ತದೆ.












Click it and Unblock the Notifications