ಪ್ರಧಾನಿ ಜತೆ ಪಾಕ್ ವಾಯುಪಡೆ ಮುಖ್ಯಸ್ಥನ ಚಿತ್ರ
ನವದೆಹಲಿ, ಜ.25: ಸರಕಾರಿ ಜಾಹೀರಾತೊಂದರಲ್ಲಿ ದೇಶದ ನಾಯಕರ ಭಾವಚಿತ್ರದೊಂದಿಗೆ ಪಾಕಿಸ್ತಾನ ವಾಯುಪಡೆಯ ಮಾಜಿ ಮುಖ್ಯಸ್ಥನ ಚಿತ್ರ ಪ್ರಕಟವಾದ ವಿಲಕ್ಷಣ ಘಟನೆ ನಡೆದಿದೆ.
ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಜಾಹೀರಾತಿನಲ್ಲಿ ಈ ವಿಲಕ್ಷಣ ಘಟನೆ ನಡೆದಿದೆ. ಪ್ರಧಾನಿ ಮನಮೋಹನ್ ಸಿಂಗ್, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಹಾಗೂ ಪಾಕ್ ವಾಯುಪಡೆಯ ಮಾಜಿ ಮುಖ್ಯ ಏರ್ ಚೀಪ್ ಮಾರ್ಷಲ್
ಈ ಘಟನೆಗೆ ತನ್ವೀರ್ ಅಹ್ಮದ್ ಚಿತ್ರ ಪ್ರಕಟಗೊಂಡಿತ್ತು.
ಈ ಘಟನೆಗೆಗೆ ಸಂಬಂಧಿಸಿದಂತೆ ಪ್ರಧಾನಿ ಕಚೇರಿ ದೇಶದ ಕ್ಷಮೆ ಕೋರಿದೆ. ಘಟನೆ ಕುರಿತು ಆಂತರಿಕ ತನಿಖೆ ಆರಂಭಿಸುವುದಾಗಿ ತಿಳಿಸಿದೆ. ಜಾಹೀರಾತಿನಲ್ಲಿ ಯಾವುದೇ ತಪ್ಪುಗಳಿಲ್ಲ. ಚಿತ್ರಕ್ಕಿಂತ ಜಾಹೀರಾತಿನ ಸಂದೇಶ ಮುಖ್ಯ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಕೃಷ್ಣಾ ತೀರ್ಥ ಹೇಳಿದರು.












Click it and Unblock the Notifications