ಬುರ್ಖಾ ತೆಗೆಯದಿದ್ದರೆ ಗುರುತು ಚೀಟಿ ಇಲ್ಲ
ನವದೆಹಲಿ,
ಜ. 23: ಬುರ್ಖಾ ತೆಗೆಯಲು ನಿರಾಕರಿಸುವ ಮುಸ್ಲಿಂ ಮಹಿಳೆಯರಿಗೆ ಚುನಾವಣಾ ಗುರುತು ಚೀಟಿ ನೀಡಬಾರದು ಎಂದು ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ. ಚುನಾವಣಾ ಗುರುತು ಚೀಟಿಯಲ್ಲಿ ಬುರ್ಖಾ ಧರಿಸಿದ ಮುಸ್ಲಿಂ ಮಹಿಳೆಯರ ಫೋಟೋ ಮುದ್ರಿಸಲು ಅನುಮತಿ ನೀಡಬೇಕು ಎಂದು ಮಧುರೈ ನಿವಾಸಿ ಅಜ್ಮಲ್ ಖಾನ್ ಅರ್ಜಿಸಲ್ಲಿಸಿದ್ದರು. id="toptextpromo">ಮುಸ್ಲಿಂ
ಮಹಿಳೆಯರ ಫೋಟೋಗಳನ್ನು ಮತದಾರರ ಗುರುತು ಚೀಟಿಯಲ್ಲಿ ಮುದ್ರಿಸುವುದು ಇಸ್ಲಾಂಗೆ ವಿರುದ್ಧವಾದುದು ಮತ್ತು ಇದು ಧಾರ್ಮಿಕ ಮೂಲಭೂತ ಹಕ್ಕುಗಳಿಗೆ ಧಕ್ಕೆಯಾಗುತ್ತದೆ. ಮುಸ್ಲಿಂ ಮಹಿಳೆಯರು ಪರ್ದಾ ಮತ್ತು ಬುರ್ಖಾ ಹಾಕಿಕೊಳ್ಳಬೇಕೆಂದು ಪವಿತ್ರ ಕುರಾನ್ ಹೇಳುತ್ತದೆ. ಅವರು ತಮ್ಮ ಗಂಡಂದಿರು ಮತ್ತು ಸಂಬಂಧಿಕರಿಗೆ ಮಾತ್ರ ತಮ್ಮ ಮುಖ ತೋರಿಸಬಹುದಾಗಿದೆ. ಮುಸ್ಲಿಂ ಮಹಿಳೆಯರು ಮತದಾರರ ಗುರುತು ಚೀಟಿಯ ವಿರೋಧಿಗಳಲ್ಲ, ಆದರೆ ತಮ್ಮ ಚಿತ್ರಗಳನ್ನು ಸಾರ್ವಜನಿಕ ದಾಖಲೆಯಲ್ಲಿ ಮುದ್ರಿಸುವುದನ್ನು ಅವರು ವಿರೋಧಿಸುತ್ತಾರೆ ಎಂದು ಖಾನ್ ವಾದಿಸಿದ್ದರು. id='are-slot-1' class='oiad oi-axt oiadv'> id='top-searched-articles'>ನೀವು
ಬುರ್ಖಾ ಹಾಕಿಕೊಂಡು ಮತ ಚಲಾಯಿಸುವಂತಿಲ್ಲ. ಬುರ್ಖಾದೊಂದಿಗೆ ಓಟು ಹಾಕಲು ಹೋದಲ್ಲಿ ಗುರುತಿಸುವಿಕೆ ವಿಚಾರದಲ್ಲಿ ಗೊಂದಲ ಉಂಟಾಗುತ್ತದೆ. ಮುಸ್ಲಿಂ ಮಹಿಳೆಯರು ಚುನಾವಣೆಗಳಲ್ಲಿ ಸ್ಪರ್ಧಿಸಬೇಕಾದಲ್ಲಿ ಏನು ಮಾಡುತ್ತೀರಿ ಎಂದು ನ್ಯಾಯಲಯ ಪ್ರಶ್ನಿಸಿತು. ಖಾನ್ ಅವರ ವಾದದಿಂದ ಸಮಾಧಾನಗೊಳ್ಳದ ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ಮತ್ತು ದೀಪಕ್ ವರ್ಮಾ ಅವರನ್ನೊಳಗೊಂಡ ಪೀಠವು ಬೇಡಿಕೆಯನ್ನು ನಿರಾಕರಿಸಿದೆ.











Click it and Unblock the Notifications