ಅರ್ಜುನ್ ಸಿಂಗ್ ಅಸ್ವಸ್ಥ ಏಮ್ಸ್ ಆಸ್ಪತ್ರೆಗೆ ದಾಖಲು
ನವದೆಹಲಿ,
ಜ.23: ಎದೆ ನೋವು ಹಾಗೂ ತೀವ್ರ ಜ್ವರದಿಂದ ಬಳಲುತ್ತಿರುವ ಹಿರಿಯ ಕಾಂಗ್ರೆಸ್ ಮುಖಂಡಅರ್ಜುನ್ ಸಿಂಗ್ ನವದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ(ಏಮ್ಸ್) ಚಿಕಿತ್ಸೆಗಾಗಿ ಶುಕ್ರವಾರ ರಾತ್ರಿ ದಾಖಲಾಗಿದ್ದಾರೆ. id="toptextpromo">ಮಾಜಿ
ಕೇಂದ್ರ ಸಚಿವರೂ ಆಗಿದ್ದ ಅರ್ಜುನ್ ಸಿಂಗ್ (79) ತೀವ್ರವಾಗಿ ಬಳಲಿದ್ದು ಎದೆ ನೋವಿನ ಜತೆಗೆ ವಿಷಮಶೀತ ಜ್ವರದಿಂದ ಬಳಲುತ್ತಿದ್ದ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಅರ್ಜುನ್ ಸಿಂಗ್ ಅವರ ಪರಿಸ್ಥಿತಿ ಸುಧಾರಿಸಿದೆ ಎಂದು ಏಮ್ಸ್ ಆಸ್ಪತ್ರೆಯ ಡಾ.ರಣ್ ದೀಪ್ ಗುಲಾರಿಯಾ ತಿಳಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಸಿಂಗ್
ಅವರು ಹೃದಯದ ತೊಂದರೆಯ ಜೊತೆಗೆ ಕೆಲವು ಸಮಸ್ಯೆಗಳಿಂದ ಬಳಲುತ್ತಿದ್ದು ಕನಿಷ್ಠ ಒಂದು ವಾರ ಕಾಲ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.











Click it and Unblock the Notifications