ರಿಲಯನ್ಸ್‌ನಲ್ಲಿ ರಾತ್ರಿ ಕರೆ ಉಚಿತ !
ಬೆಂಗಳೂರು,
ಜ. 22 : ಇನ್ನು ಮುಂದೆ ರಿಲಯನ್ಸ್ ಮೊಬೈಲ್‌ನಲ್ಲಿ ಅದೇ ನೆಟ್‌ವರ್ಕ್‌ನ ಮತ್ತೊಂದು ಮೊಬೈಲ್‌ಗೆ ರಾತ್ರಿಯಿಡೀ ಮನಸೋ ಇಚ್ಛೆ ಉಚಿತವಾಗಿ ಮಾತನಾಡಬಹುದು ! ರಿಲಯನ್ಸ್ ಕಮ್ಯುನಿಕೇಶನ್ಸ್ ಹೊಸ ವರ್ಷದ ಮೊದಲ ಉತ್ಪನ್ನವನ್ನು ಬಿಡುಗಡೆಗೊಳಿಸಿದೆ. ಈ ಕೊಡುಗೆಯಲ್ಲಿ ರಾತ್ರಿಯ ಕರೆಗಳಿಗೆ ಹಲವು ರಿಯಾಯಿತಿಗಳನ್ನು ಪ್ರಕಟಿಸಲಾಗಿದೆ. id="toptextpromo">ಲೈಟ್
ನೈಟ್ ಪ್ಯಾಕ್ ಹಾಗೂ ಬ್ರೈಟ್‌ನೈಟ್ ಎಂಬ ಈ ಕೊಡುಗೆಯಲ್ಲಿ ಯಾವುದೇ ರಿಲಯನ್ಸ್ ಮೊಬೈಲ್‌ಗೆ ಸ್ಥಳೀಯ ಕರೆಗಳು ಉಚಿತವಾಗಿವೆ. ಇತರ ಜಾಲಗಳ ಸ್ಥಳೀಯ ಹಾಗೂ ರಾಷ್ಟ್ರೀಯ ಕರೆಗಳಿಗೆ ಶೇ.50 ರಿಯಾಯಿತಿ ಪ್ರಕಟಿಸಲಾಗಿದೆ. ಜಿಎಸ್‌ಎಂ ಮತ್ತು ಸಿಡಿಎಂ ಚಂದಾದಾರರಿಗೆ ಇದು ಲಭ್ಯ. ರಾತ್ರಿ 11ರಿಂದ ಬೆಳಗ್ಗೆ 6ರ ನಡುವೆ ರಿಲಯನ್ಸ್ ಮೊಬೈಲ್‌ನಿಂದ ಸ್ಥಳೀಯ ಕರೆಗಳನ್ನು ಉಚಿತವಾಗಿ ಮಾಡಬಹುದು. ಇದಕ್ಕಾಗಿ 29 ರೂ. ದರದ ಲೈಟ್ ನೈಟ್ ಪ್ಯಾಕ್‌ನ್ನು ಪಡೆಯಬೇಕು. 1 ತಿಂಗಳು ಅವಧಿ ಇರುತ್ತದೆ. id='are-slot-1' class='oiad oi-axt oiadv'> id='top-searched-articles'>ಇದೇ
ರೀತಿಯಲ್ಲಿ 59 ರೂ.ಗಳ ಬ್ರೈಟ್ ನೈಟ್ ಪ್ಯಾಕ್ ಮೂಲಕ ಉಚಿತವಾಗಿ ಎಸ್‌ಟಿಡಿ ಕರೆಗಳನ್ನು ಮಾಡಬಹುದು. ತಡ ರಾತ್ರಿಯವರೆಗೆ ಕೆಲಸ ಮಾಡುವ ವೃತ್ತಿಪರರಿಗೆ, ಉದ್ಯಮಿಗಳಿಗೆ, ವಿದ್ಯಾರ್ಥಿಗಳಿಗೆ ಈ ಯೋಜನೆ ಅನುಕೂಲ ಒದಗಿಸಿಕೊಡಲಿದೆ. ಗ್ರಾಹಕರು ಈ ಯೋಜನೆಯ ಮೂಲಕ ಭಾರತದ ಯಾವುದೇ ಜಾಗಕ್ಕೆ ರಾತ್ರಿಯಿಡೀ ಉಚಿತವಾಗಿ ಮಾತನಾಡಬಹುದು ಎಂದು ರಿಲಯನ್ಸ್ ಕಮ್ಯುನಿಕೇಶನ್ಸ್ ತಿಳಿಸಿದೆ.











Click it and Unblock the Notifications