ಟ್ಯಾಕ್ಸಿ ಚಾಲಕರಿಗೆ ಮರಾಠಿ ಜ್ಞಾನ ಕಡ್ಡಾಯ

Taxi drivers must know Marathi languge rule
ಮುಂಬೈ, ಜ. 20 : ಮುಂಬೈ ಮಹಾನಗರದಲ್ಲಿ ಟ್ಯಾಕ್ಸಿ ಓಡಿಸುವ ಚಾಲಕರಿಗೆ ಮರಾಠಿ ಭಾಷೆಯ ಜ್ಞಾನ ಕಡ್ಡಾಯವಾಗಿ ಇರತಕ್ಕದ್ದು ಎಂಬ ಹೊಸ ಕಾಯಿದೆಯನ್ನು ಮಹಾರಾಷ್ಟ್ರ ಸರಕಾರ ಜಾರಿಗೆ ತಂದಿದೆ. ಈ ಕಾನೂನಿನ ಪ್ರಕಾರ ಟ್ಯಾಕ್ಸಿ ಚಾಲಕರಿಗೆ ಮರಾಠಿ ಓದುವುದಕ್ಕೆ ಬರೆಯುವುದಕ್ಕೆ ಮತ್ತು ಮಾತನಾಡುವುದಕ್ಕೆ ಗೊತ್ತಿರಲೇಬೇಕು.

ಮರಾಠಿ ಭಾಷಾ ಜ್ಞಾನ ಇಲ್ಲದವರು ಕ್ಯಾಬ್ ಚಾಲನೆ ಮಾಡುವಂತಿಲ್ಲ. ಭಾಷೆ ಗೊತ್ತಿಲ್ಲದಿದ್ದರೆ ಪರ್ಮಿಟ್ ಕೊಡುವುದಿಲ್ಲ. ಚಾಲಕರಾಗ ಬಯಸುವವರು ಕನಿಷ್ಠ 15 ವರ್ಷ ಮುಂಬೈ ನಗರದಲ್ಲಿ ನೆಲಸಿರಬೇಕು. ಅದಕ್ಕೆ ಅವರು ಅಗತ್ಯ ಪುರಾವೆ ದಾಖಲೆಗಳನ್ನು ಸಾರಿಗೆ ಇಲಾಖೆಗೆ ಸಲ್ಲಿಸಬೇಕು.

ಈ ಕಾನೂನು ನ್ಯಾಯಬಾಹಿರ ಎಂದು ಮುಂಬೈ ಟ್ಯಾಕ್ಸಿ ಚಾಲಕರ ಸಂಘ ಪ್ರತಿಕ್ರಿಯಿಸಿದೆ. ಈ ಕಾನೂನನ್ನು ಚಾಲಕರ ಸಮುದಾಯ ಒಪ್ಪುವುದಿಲ್ಲ ಎಂದು ಧೃಡವಾಗಿ ಹೇಳಿದೆ. ಮುಂಬೈ ನಗರದಲ್ಲಿರುವ ಬಹುತೇಕ ಟ್ಯಾಕ್ಸಿ ಚಾಲಕರು ಬಿಹಾರ ಮತ್ತು ಉತ್ತರ ಪ್ರದೇಶ ಮೂಲದವರಾಗಿದ್ದಾರೆ.

ಸ್ಥಳೀಯರು ಮತ್ತು ಹೊರಗಿನವರು ಎಂಬ ಬೇಧಭಾವ, ವಾದ ವಿವಾದಗಳು ಮುಂಬೈ ನಗರದಲ್ಲಿ ಸಾಕಷ್ಟು ನಡೆದಿವೆ. ಘರ್ಷಣೆಗಳು, ಗಲಭೆಗಳೂ ನಡೆದಿವೆ. ಮುಂಬೈ ನಗರದಲ್ಲಿ ಜೀವನ ನಡೆಸುತ್ತಿರುವ ಉತ್ತರ ಭಾರತದ ಪ್ರಜೆಗಳನ್ನು, ಮುಖ್ಯವಾಗಿ ಕಟ್ಟಡ ಕೂಲಿ ಕಾರ್ಮಿಕರನ್ನು ಶಿವಸೇನೆಯ ಕಾರ್ಯಕರ್ತರು ಇಟ್ಟಾಡಿಸಿಕೊಂಡು ಹೊಡೆದು ಓಡಿಸಿದ ಘಟನೆಯನ್ನು ಸ್ಮರಿಸಬಹುದಾಗಿದೆ.

ಅಂದಹಾಗೆ, ಟ್ಯಾಕ್ಸಿ ಅಥವಾ ಆಟೋ ಅಥವಾ ಜಟಕಾ ಚಲಿಸುವವರಗೆ ಆಯಾ ಪ್ರದೇಶದಲ್ಲಿ ವಾಸಿಸುವ ಬಹುಸಂಖ್ಯಾತರು ಆಡುವ ಭಾಷೆ ಗೊತ್ತಿದ್ದರೆ ಪರಸ್ಪರ ಒಡನಾಟಕ್ಕೆ ಸಹಕಾರಿಯಾಗುತ್ತದೆ ಎಂಬ ವಾದ ಸಮಂಜಸ. ಇಲ್ಲದಿದ್ದರೆ ಚಾಲಕ ಮತ್ತು ಪ್ರಯಾಣಿಕನ ನಡುವೆ ಅರ್ಥಪೂರ್ಣ ಸಂಭಾಷಣೆ ಸಾಧ್ಯವಾಗುವುದು ಕಷ್ಟವಾಗುತ್ತದೆ. ಅಂಥ ಸಂದರ್ಭಗಳಲ್ಲಿ ಅಪಾರ್ಥ, ಜಗಳ, ಕದನಗಳು ಉದ್ಭವಿಸುತ್ತವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+