ಕೇರಳ ಮೂಲದ ವಿಪ್ರೋ ಟೆಕ್ಕಿ ಆತ್ಮಹತ್ಯೆ

ಕೇರಳದ ತ್ರಿವೇಂದ್ರಮ್ ಹರಳೂರಿನ ನಿವಾಸಿ ಲಕ್ಷ್ಮಿ ನಾಯರ್ (23) ಸಾವನ್ನಪ್ಪಿರುವ ಟೆಕ್ಕಿ, ಅವರ ಸಹೋದರ ಅನೀಸ್ ಜೊತೆಗೆ ವಾಸಿಸುತ್ತಿದ್ದರು. ಕಳೆದೆರಡು ದಿನಗಳಿಂದ ಖಿನ್ನತೆಗೆ ಒಳಗಾಗಿದ್ದ ಟೆಕ್ಕಿ ಕೆಲಸಕ್ಕೂ ಹೋಗದೆ ಮನೆಯಲ್ಲಿದ್ದುಕೊಂಡೇ ಲ್ಯಾಪ್ ಟಾಪ್ ಮೂಲಕ ಕಚೇರಿ ಕೆಲಸವನ್ನು ನಿರ್ವಹಿಸುತ್ತಿದ್ದರು. ಸೋಮವಾರ ಮಧ್ಯಾಹ್ನ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಶರಣಾಗಿದ್ದಾರೆ. ಆತ್ಮಹತ್ಯೆ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ ಎಂದು ಎಚ್ ಎಸ್ ಆರ್ ಲೇಔಟ್ ಪೊಲೀಸರು ತಿಳಿಸಿದ್ದಾರೆ. ಲಕ್ಷ್ಮಿ ನಾಯರ್ ಸಹೋದರ ಅನೀಸ್ ಹನಿವೆಲ್ ಕಂಪನಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇತ್ತೀಚಿಗಷ್ಟೇ ಲಕ್ಷ್ಮಿ ಅವರ ವಿವಾಗ ನಿಶ್ಚಿತಾರ್ಥವಾಗಿತ್ತು.











Click it and Unblock the Notifications