ರಾಜ್ಯದ 6 ವಿವಿಗಳ ಮಾನ್ಯತೆ ರದ್ದು
ನವದೆಹಲಿ,
ಜ. 19 : ಯುಜಿಸಿ ರೂಪಿಸಿದ ನಿಯಮಾವಳಿ ಪ್ರಕಾರ ಮೂಲಭೂತ ಸೌಕರ್ಯಗಳ ಒದಗಿಸಲು ವಿಫಲವಾಗಿರುವ ಕ್ರೈಸ್ಟ್ ಕಾಲೇಜ್ ಸೇರಿದಂತೆ ರಾಜ್ಯದ ಆರು ಮತ್ತು ದೇಶದ 44 ಡೀಮ್ಡ್ ವಿಶ್ವವಿದ್ಯಾಲಯಗಳ ಮಾನ್ಯತೆ ರದ್ದುಗೊಳಿಸಲಾಗುವುದು ಎಂದು ಕೇಂದ್ರ ಸರಕಾರ ಸೋಮವಾರ ಸುಪ್ರಿಂಕೋರ್ಟ್ ತಿಳಿಸಿದೆ. id="toptextpromo">ಪರಿಶೀಲನಾ
ಸಮಿತಿಯು ಕಳೆದ ನವೆಂಬರ್ ನಲ್ಲಿ ಸಲ್ಲಿಸಿದ ವರದಿ ಆಧಾರದ ಮೇಲೆ ಒಟ್ಟು 126 ಡೀಮ್ಡ್ ವಿವಿಗಳ ಪೈಕಿ 44ವಿವಿಗಳ ಮಾನ್ಯತೆ ರದ್ದು ಮಾಡಲಾಗುವುದು ಎಂದು ಮುಖ್ಯನ್ಯಾಯಮೂರ್ತಿ ಕೆ ಜಿ ಬಾಲಕೃಷ್ಣನ್ ನೇತೃತ್ವದ ಪೀಠದ ಮುಂದೆ ಸಾಲಿಸಿಟರ್ ಜನರಲ್ ಗೋಪಾಲ್ ಸುಬ್ರಮಣಿಯಮ್ ಹೇಳಿದರು. ರಾಜ್ಯ ಕ್ರೈಸ್ಟ್ ಕಾಲೇಜು(ಬೆಂಗಳೂರು), ಯೇನಪೋಯ ವಿವಿ(ಮಂಗಳೂರು), ದೇವರಾಜ್ ಅರಸ್ ವಿವಿ(ಕೋಲಾರ), ಬಿಎಲ್ ಡಿಇ(ಬಿಜಾಪುರ), ಸಿದ್ಧಾರ್ಥ ಅಕಾಡಮಿ ಆಫ್ ಹೈಯರ್ ಎಜುಕೇಶನ್(ತುಮಕೂರು) ಮತ್ತು ಜೈನ್ ವಿವಿ (ಬೆಂಗಳೂರು) ಮಾನ್ಯತೆ ರದ್ದಾದ ಡೀಮ್ಡ್ ವಿವಿಗಳ ಪಟ್ಟಿಯಲ್ಲಿವೆ. id='are-slot-1' class='oiad oi-axt oiadv'> id='top-searched-articles'>ಈ
ವಿವಿಗಳು ರಾಜ್ಯದ ಬೇರೆ ಬೇರೆ ವಿಶ್ವವಿದ್ಯಾಲಯದ ಅಡಿ ಕಾರ್ಯನಿರ್ವಹಿಸುವುದರಿಂದ ಕೇಂದ್ರದ ಈ ಕ್ರಮದಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುವುದಿಲ್ಲ ಎಂದು ಕೇಂದ್ರ ಸುಪ್ರಿಂಕೋರ್ಟ್ ಗೆ ಸಲ್ಲಿಸಿದ ಪ್ರಮಾಣ ಪತ್ರದಲ್ಲಿ ತಿಳಿಸಿದೆ.











Click it and Unblock the Notifications