ಹಾಕಿ ಸ್ಟಿಕ್ ಗೆ ಸಹಾರಾ ಉರುಗೋಲು

Hockey india players
ನವದೆಹಲಿ, ಜ. 13 : ಬಾಕಿ ಹಣಕ್ಕೆ ಸಂಬಂಧಿಸಿದಂತೆ ಹಾಕಿ ಆಟಗಾರರು ಹಾಕಿ ವಿಶ್ವಕಪ್ ನ ಅಭ್ಯಾಸ ಪಂದ್ಯಗಳನ್ನು ಬಹಿಷ್ಕರಿಸಿದ ಹಿನ್ನೆಲೆಯಲ್ಲಿ ಸಹರಾ ಇಂಡಿಯಾ ಆಟಗಾರರ ಬಾಕಿ ಹಣ ನೀಡಲು ಒಂದು ಕೋಟಿ ರುಪಾಯಿಗಳನ್ನು ಬಿಡುಗಡೆ ಮಾಡುವುದಾಗಿ ಸ್ಪಷ್ಟಪಡಿಸಿದೆ. ಈ ಮೂಲಕ ಹಾಕಿ ಇಂಡಿಯಾ ಮತ್ತು ಹಾಕಿ ಆಟಗಾರರ ನಡುವೆ ಉಂಟಾಗಿದ್ದ ಗೊಂದಲಕ್ಕೆ ತಾತ್ಕಾಲಿಕ ತೆರೆಬಿದ್ದಂತಾಗಿದೆ.

ಹಾಕಿ ಆಟಗಾರರ ಸ್ಪಾನ್ಸರ್ ಶಿಪ್ ಪಡೆದುಕೊಂಡಿರುವ ಸಹರಾ ಇಂಡಿಯಾ ಮುಂದಿನ ತಿಂಗಳು ನಡೆಯಲಿರುವ ಹಾಕಿ ವಿಶ್ವಕಪ್ ಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಒಂದು ಕೋಟಿ ರುಪಾಯಿ ಹಣವನ್ನು ಬಿಡುಗಡೆ ಮಾಡಿದೆ. ಆಟಗಾರರು ಪುಣೆಯಲ್ಲಿ ನಡೆಯಬೇಕಿರುವ ಅಭ್ಯಾಸ ಪಂದ್ಯಕ್ಕೆ ಕೂಡಲೇ ಹಾಜರಾಗಬೇಕು ಎಂದು ಮನವಿ ಮಾಡಿಕೊಂಡಿದೆ. ಕಳೆದ ವರ್ಷಕ್ಕೆ ನೀಡಬೇಕಿದ್ದ ಹಣವನ್ನು ಈಗಾಗಲೇ ಹಾಕಿ ಇಂಡಿಯಾಕ್ಕೆ 70 ಲಕ್ಷ ರುಪಾಯಿ ನೀಡಲಾಗಿದೆ. ಹಾಕಿ ವಿಶ್ವಕಪ್ ಹಿತಕ್ಕಾಗಿ ಸಹರಾ ಮತ್ತೆ ಒಂದು ಕೋಟಿ ರುಪಾಯಿಗಳನ್ನು ಬಿಡುಗಡೆ ಮಾಡಲಿದೆ ಎಂದು ಸಹರಾ ಇಂಡಿಯಾದ ಕಾರ್ಪೋರೇಟ್ ಅಧಿಕಾರಿ ಅಭಿಜಿತ್ ಸರ್ಕಾರ್ ತಿಳಿಸಿದ್ದಾರೆ.

ವಿಡಿಯೋ: ವೇತನರಿಕ್ತ ಹಟಮಾರಿ ಹಾಕಿ ಆಟಗಾರರು

ಕಳೆದ ಒಂದು ವರ್ಷದಿಂದ ಹಾಕಿ ಆಟಗಾರರಿಗೆ ಸಂದಾಯವಾಗಬೇಕಿದ್ದ ಹಣವನ್ನು ಹಾಕಿ ಇಂಡಿಯಾ ಪಾವತಿಸಿರಲಿಲ್ಲ. ಇದಕ್ಕಾಗಿ ಪುಣೆಯಲ್ಲಿ ನಡೆಯಬೇಕಿದ್ದ ಅಭ್ಯಾಸ ಪಂದ್ಯಗಳನ್ನು ಆಟಗಾರ ಬಹಿಷ್ಕರಿಸಿದ್ದರು. ಆಟಗಾರು ಬಾಕಿ ಹಣಕ್ಕಾಗಿ ಪಟ್ಟು ಹಿಡಿದಿದ್ದರೆ ಅತ್ತ ಹಾಕಿ ಇಂಡಿಯಾದ ಮುಖ್ಯಸ್ಥ ಎ ಕೆ ಮಟ್ಟೂ ಆಟಗಾರರ ವರ್ತನೆಯನ್ನು ತೀವ್ರವಾಗಿ ಖಂಡಿಸಿದ್ದರು. ದೇಶಕ್ಕಿಂತ ಹಣವೇ ಮುಖ್ಯ. ಆಟಗಾರರ ವರ್ತನೆ ಹೀಗೆ ಮುಂದುವರೆದರೆ ವಿಶ್ವಕಪ್ ಗಾಗಿ ಬೇರೆ ತಂಡವನ್ನು ಆಯ್ಕೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+