ಬಿಎಂಐಸಿಯಲ್ಲಿರುವ ಗೌಡರ ಸಂಬಂಧಿಗಳು, ನೈಸ್

ಮಂಗಳವಾರ ಕೆಲ ದಾಖಲೆಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ ನೈಸ್ ದೇವೇಗೌಡರ 13 ಮಂದಿ ಸಂಬಂಧಿಗಳು 1995ರಲ್ಲಿ ಬಿಎಂಐಸಿ ಯೋಜನೆಯ ಭಾಗವಾಗಿ ಉಪನಗರ ನಿರ್ಮಾಣಕ್ಕೆ ಗುರುತಿಸಿದ್ದ ಹೋಬಳಿಯ ದೇವೇಗೆರೆ ಗ್ರಾಮದ ಹಲವು ಸರ್ವೆ ನಂಬರುಗಳಲ್ಲಿ 70 ಎಕರೆಗೂ ಹೆಚ್ಚು ಭೂಮಿ ಹೊಂದಿದ್ದಾರೆ ಎಂದು ತಿಳಿಸಿದೆ.
ಬಿ ಚನ್ನಪ್ಪ, ಕೆ ಎಂ ಹೊನ್ನಪ್ಪ, ಶಂಕರಪ್ಪ, ಶಿವರಾಮು, ಸುಶೀಲಾ, ಜಯಮ್ಮ, ಕವಿತಾ ಮತ್ತಿತರರು ದೇವೇಗೆರೆಯಲ್ಲಿ ಭೂಮಿ ಹೊಂದಿರುವ ಗೌಡರ ಸಂಬಂಧಿಗಳು. ಅಲ್ಲದೇ ಅವರ ಮಗ ಎಚ್ ಡಿ ಬಾಲಕೃಷ್ಣಗೌಡ ಅವರೂ ಅಲ್ಲಿ ಆಸ್ತಿ ಹೊಂದಿದ್ದಾರೆ ಎಂದು ಕಂಪನಿ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ವಿವರಿಸಲಾಗಿದೆ.
ವಿಡಿಯೋ: ಪ್ರತಿಭಟನೆಗೆ ಗೌಡರ ಪ್ರತ್ಯುತ್ತರ
ಇದಲ್ಲದೇ ಬಿಎಂಐಸಿ ಭಾಗವಾಗಿ ಬಿಡದಿ ಬಳಿ ಕಾರ್ಪೋರೇಟ್ ಉಪನಗರ ನಿರ್ಮಿಸಲು ಗುರುತಿಸಿರುವ ಪ್ರದೇಶದಲ್ಲಿರುವ ಕೇತಗಾನಹಳ್ಳಿಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ 27 ಎಕರೆಯಷ್ಟು ಭೂಮಿ ಹೊಂದಿದ್ದಾರೆ ಎಂದು ನೈಸ್ ತಿಳಿಸಿದೆ. ಆದರೆ, ನೈಸ್ ಆರೋಪವನ್ನು ದೇವೇಗೌಡ ತಳ್ಳಿಹಾಕಿದ್ದಾರೆ.












Click it and Unblock the Notifications