ಆರ್ ಟಿಐ ವ್ಯಾಪ್ತಿಗೆ ಸಿಜೆಐ : ದಿಲ್ಲಿ ಹೈಕೋರ್ಟ್
ನವದೆಹಲಿ,
ಜ. 13 : ಸುಪ್ರಿಂಕೋರ್ಟ್ ನ ಮುಖ್ಯನ್ಯಾಯಮೂರ್ತಿ ಅವರ ಕಚೇರಿ(ಸಿಜೆಐ) ಮಾಹಿತಿ ಹಕ್ಕು(ಆರ್ ಟಿಐ) ಕಾಯ್ದೆಯ ಪರಿಧಿಗೆ ಒಳಪಡುತ್ತದೆ ಎಂದು ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ನ್ಯಾಯಾಂಗದ ಸ್ವಾತಂತ್ರ್ಯವು ನ್ಯಾಯಾಧೀಶರ ಖಾಸಗಿ ಹಕ್ಕು ಅಲ್ಲ. ಅದು ಅವರ ಮೇಲೆ ಸಂವಿಧಾನವು ಹೊರಿಸಿರುವ ಗುರುತರ ಜವಾಬ್ದಾರಿ ಎಂದು ನ್ಯಾಯಾಲಯ ತೀರ್ಪಿನಲ್ಲಿ ಹೇಳಿದೆ. id="toptextpromo">ಮುಖ್ಯನ್ಯಾಯಾಮೂರ್ತಿ
ಎ ಪಿ ಷಾ ನೇತೃತ್ವದ ಪೀಠ ಸಿಜೆಐ ಕಚೇರಿಯನ್ನು ಆರ್ ಟಿಐ ಕಾಯ್ದೆಗೆ ಒಳಪಡಿಸುವುದರಿಂದ ನ್ಯಾಯಾಂಗ ಸ್ವಾತಂತ್ರಕ್ಕೆ ಧಕ್ಕೆ ಉಂಟಾಗುತ್ತದೆ ಎಂಬ ಹೇಳಿಕೆ ಒಳಗೊಂಡ ಸುಪ್ರಿಂಕೋರ್ಟ್ ಮನವಿಯನ್ನು ತಳ್ಳಿಹಾಕಿದೆ. ಈ ಮೂಲಕ ಸಿಜೆಐ ಸಾರ್ವಜನಿಕ ಆಸ್ತಿಯಾಗಿದ್ದು, ಅವರ ಕಚೇರಿ ಆರ್ ಟಿಐ ಕಾಯ್ದೆ ವ್ಯಾಪ್ತಿಗೆ ಬರುತ್ತದೆ ಎಂದು ಸೆಪ್ಟೆಂಬರ್ 2 ರಂದು ಏಕಸದಸ್ಯ ನ್ಯಾಯಪೀಠ ನೀಡಿದ್ದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ. id='are-slot-1' class='oiad oi-axt oiadv'> id='top-searched-articles'>ದಿಲ್ಲಿ
ಹೈಕೋರ್ಟ್ ಆ ಐತಿಹಾಸಿಕ ತೀರ್ಪು ಸುಪ್ರಿಂಕೋರ್ಟ್ ಮುಖ್ಯನ್ಯಾಯಾಮೂರ್ತಿ ಅವರಿಗೆ ದೊಡ್ಡ ಹಿನ್ನೆಡೆ ಎನ್ನಲಾಗಿದೆ. ಈ ಹಿಂದೆ ಬಾಲಕೃಷ್ಣನ್ ಅವರು ಸಿಜೆಐ ಕಚೇರಿ ಆರ್ ಟಿಐ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಹೇಳಿಕೆ ನೀಡಿದ್ದರು.











Click it and Unblock the Notifications