ಇನ್ಫೋಸಿಸ್ 3ನೇ ತ್ರೈಮಾಸಿಕ ಗಳಿಕೆ ಕುಸಿತ
ಬೆಂಗಳೂರು,
ಜ. 12 : ಜಾಗತಿಕ ಮಾರುಕಟ್ಟೆಯಲ್ಲಿ ಆರ್ಥಿಕ ಬಿಕ್ಕಟ್ಟಿನಲ್ಲೂ ಯಥಾ ಸ್ಥಿತಿ ಕಾಯ್ದುಕೊಂಡಿದ್ದ ಬೆಂಗಳೂರು ಮೂಲದ ಇನ್ಫೋಸಿಸ್ ಸಾಫ್ಟ್ ವೇರ್ ಕಂಪನಿ 2010ರ ಮೂರನೇ ತ್ರೈಮಾಸಿಕದಲ್ಲಿ ಇಂದು ಪ್ರಕಟಿಸಿದ್ದು, ಶೇ. 3.6 ರಷ್ಟು ಕುಸಿತ ಕಂಡಿದೆ. id="toptextpromo">2009-10ನೇ
ಆರ್ಥಿಕ ವರ್ಷದ ಅಕ್ಟೋಬರ್-ಡಿಸೆಂಬರ್ ಅವಧಿಯಲ್ಲಿ ಒಟ್ಟು 5,741 ಕೋಟಿ ರುಪಾಯಿಗಳಷ್ಟು ವ್ಯವಹಾರ ನಡೆಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 5,786 ಕೋಟಿ ರುಪಾಯಿ ವ್ಯವಹಾರ ನಡೆಸಲಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶೇ. 3.6ರಷ್ಟು ಕುಸಿತ ಕಂಡಿದೆ. ಪ್ರಸಕ್ತ ತ್ರೈಮಾಸಿಕದಲ್ಲಿ 1,582 ನಿವ್ವಳ ಲಾಭ ಗಳಿಸಿದೆ ಎಂದು ಕಂಪನಿ ಹಣಕಾಸು ವಿಭಾಗದ ಮುಖ್ಯಸ್ಥ ವಿ ಬಾಲಕೃಷ್ಣನ್ ಹೇಳಿದರು. id='are-slot-1' class='oiad oi-axt oiadv'> id='top-searched-articles'>2008-09
ನೇ ಆರ್ಥಿಕ ವರ್ಷದ ಅಕ್ಟೋಬರ್-ಡಿಸೆಂಬರ್ ಅವಧಿಯಲ್ಲಿ 1,641 ಕೋಟಿ ರುಪಾಯಿಯಷ್ಟು ನಿವ್ವಳ ಲಾಭ ಗಳಿಸಿತ್ತು. ಕಳೆದ ವರ್ಷದ ತ್ರೈಮಾಸಿಕದಲ್ಲಿ 1,231 ಕೋಟಿ ರುಪಾಯಿಯಷ್ಟು ನಿವ್ವಳ ಲಾಭ ಗಳಿಸಿತ್ತು. ಒಟ್ಟು 5,786 ಕೋಟಿ ರುಗಳ ವ್ಯವಹಾರವನ್ನು ಪ್ರಸಕ್ತ ತ್ರೈಮಾಸಿಕದಲ್ಲಿ ನಡೆಸಿತ್ತು. ಈ ಮೂಲಕ ಆರ್ಥಿಕ ಬಿಕ್ಕಟ್ಟಿನ ನಡುವೆಯೂ ಕಂಪನಿ ತನ್ನ ವಹಿವಾಟಿನಲ್ಲಿ ಭಾರಿ ಏರಿಕೆ ಕಂಡಿರುವುದು ಅಚ್ಚರಿಗೆ ಕಾರಣವಾಗಿತ್ತು.











Click it and Unblock the Notifications