ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಿವಿ 5 ವಿರುದ್ಧ ಆಂಧ್ರದಲ್ಲಿ ಪ್ರಕರಣ ದಾಖಲು

|
Google Oneindia Kannada News

TV 5 booked for 'malicious' report on YSR death
ಹೈದರಾಬಾದ್, ಜ.9: ವೈಎಸ್ ಆರ್ ಸಾವಿಗೆ ಸಂಬಂಧಿಸಿದಂತೆ ಪ್ರಚೋದನಾಕಾರಿ ಸುದ್ದಿ ಪ್ರಸಾರ ಮಾಡಿದ್ದ ತೆಲುಗು ಟಿವಿ ವಾಹಿನಿ ಟಿವಿ 5 ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆಂಧ್ರದ ಮಾಜಿ ಮುಖ್ಯಮಂತ್ರಿ ವೈ ಎಸ್ ರಾಜಶೇಖರ ರೆಡ್ಡಿ ಅವರ ಸಾವಿನ ಹಿಂದೆ ಅಂಬಾನಿ ಸಹೋದರರ ಕೈವಾಡ ಇದೆ ಎಂಬ 'ಆಧಾರ ರಹಿತ ಮತ್ತು ಮತ್ಸರ'ದ ಸುದ್ದಿ ಪ್ರಸಾರ ಮಾಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.

ರಷ್ಯಾ ಮೂಲದ ವೆಬ್ ಸೈಟೊಂದು ವೈಎಸ್ ಆರ್ ಸಾವಿನ ಹಿಂದೆ ಅಂಬಾನಿಗಳ ಕೈವಾಡ ಇದೆ ಎಂಬ ಶಂಕೆಯನ್ನು ವ್ಯಕ್ತಪಡಿಸಿತ್ತು. ಇದರ ಆಧಾರವಾಗಿ ಟಿವಿ 5 ಸುದ್ದಿ ಪ್ರಸಾರ ಮಾಡಿತ್ತು. ಈ ವಿವಾದಾತ್ಮಕ ಸುದ್ದಿ ಆಂಧ್ರದಲ್ಲಿ ತೀವ್ರ ಸಂಚಲನ ಉಂಟುಮಾಡಿತ್ತು. ಸುದ್ದಿಯಿಂದ ಕೆರಳಿದ ವೈಎಸ್ ಆರ್ ಅಭಿಮಾನಿಗಳು ಆಂಧ್ರದಾದ್ಯಂತ ರಿಲಯನ್ಸ್ ಮಳಿಗೆಗಳ ಮೇಲೆ ದಾಳಿ ಮಾಡಿ ಧ್ವಂಸ ಮಾಡಿದ್ದರು. ಕಾಂಗ್ರೆಸ್ ಕಾರ್ಯಕರ್ತರು ಆಂಧ್ರ ಬಂದ್ ಗೆ ಕರೆಕೊಟ್ಟಿದ್ದಾರೆ.

ಐಪಿಸಿ ಸೆಕ್ಷನ್153/3A (ಪ್ರಚೋದನಕಾರಿ ಸುದ್ದಿ ಪ್ರಸಾರ ಮಾಡಿ ಗಲಭೆಗೆ ಕಾರಣವಾದ ಕಾರಣ) ಹಾಗೂ ಸೆಕ್ಷನ್ 502 A (ಮಾನಹಾನಿಗೆ ಸಂಬಂಧಪಟ್ಟಂತೆ )ಅಡಿಯಲ್ಲಿ ಜುಬಿಲಿ ಹಿಲ್ಸ್ ಪೊಲೀಸ್ ಠಾಣೆ ಟಿವಿ 5 ವಿರುದ್ಧ ಪ್ರಕರಣಗಳನ್ನು ದಾಖಲಿಸಿದೆ. ಇದೇ ಸುದ್ದಿಯನ್ನು ಬಿತ್ತರಿಸಿದ ಉಳಿದ ವಾಹಿನಿಗಳ ವಿರುದ್ಧವೂ ಪ್ರಕರಣ ದಾಖಲಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಿಲಯನ್ಸ್ ಮಳಿಗೆಗಳು ಹಾಗೂ ರಿಲಯನ್ಸ್ ಗ್ರೂಪ್ ಸಂಸ್ಥೆಗಳ ಮೇಲೆ ದಾಳಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 185 ಮಂದಿಯನ್ನು ಬಂಧಿಸಿದ್ದು ಅವರ ವಿರುದ್ಧ 96 ಕೇಸುಗಳನ್ನು ದಾಖಲಿಸಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X