ಜ.5 ರಿಂದ 8ರ ವರೆಗೆ ಮಕ್ಕಳ ಗಣತಿ ಶುರು
ಬೆಂಗಳೂರು,
ಜ. 5 : ಸರ್ವ ಶಿಕ್ಷಣ ಅಭಿಯಾನದಡಿ ಸಮಗ್ರ ಮಕ್ಕಳ ಗಣತಿ 2010 ಈ ತಿಂಗಳ 5 ರಿಂದ 8ರ ವರೆಗೆ ನಾಲ್ಕು ದಿನಗಳ ಕಾಲ ನಡೆಯಲಿದೆ. ಮೂಲಭೂತ ಹಕ್ಕಾಗಿ ಶಿಕ್ಷಣವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ 18 ವರ್ಷದೊಳಗಿನ ಎಲ್ಲ ಮಕ್ಕಳ ಗಣತಿ ನಡೆಸಲು ತೀರ್ಮಾನಿಸಲಾಗಿದೆ. id="toptextpromo">ರಾಷ್ಟ್ರೀಯ
ಮಾಧ್ಯಮಿಕ ಶಿಕ್ಷಣ ಅಭಿಯಾನ ಯೋಜನೆಯ ಸಹಭಾಗಿತ್ವದಲ್ಲಿ ಗಣತಿ ಕಾರ್ಯ ನಡೆಯಲಿದೆ. ಶಾಲಾ ವಯಸ್ಸಿನ ಎಲ್ಲ ಮಕ್ಕಳನ್ನು ಗುರುತಿಸಿ ಶಾಲೆಗೆ ದಾಖಲಿಸಿಕೊಳ್ಳಲು ಹಾಗೂ 4 ರಿಂದ 5 ವಯೋಮಾನದ ಮಕ್ಕಳ ನಿಖರ ಮಾಹಿತಿ ಹಾಗೂ 2010-11 ನೇ ಸಾಲಿನಲ್ಲಿ ಶಾಲಾ ಪೂರ್ವ ಶಿಕ್ಷಣ ಮತ್ತು ಶಾಲೆಗೆ ಸೇರಲಿರುವ ಮಕ್ಕಳ ಮಾಹಿತಿ ಪಡೆಯಲು ಈ ಗಣತಿ ನಡೆಯುತ್ತಿದೆ. id='are-slot-1' class='oiad oi-axt oiadv'> id='top-searched-articles'>ಈ
ಗಣತಿ ಕಾರ್ಯದಿಂದಾಗಿ ಶಾಲೆಯಿಂದ ಹೊರಗುಳಿದ ಮಕ್ಕಳ ಖಚಿತ ಮಾಹಿತಿ ಲಭ್ಯವಾಗುವುದರ ಜೊತೆಗೆ ಮಕ್ಕಳ ಕುಟುಂಬದ ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿಯ ಮಾಹಿತಿಯೂ ಸಿಗಲಿದೆ. ರಾಜ್ಯ ಸರಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲಾ ಕಾಲೇಜುಗಳ ಬೋಧಕರು ಈ ಗಣತಿ ಕಾರ್ಯದಲ್ಲಿ ತೊಡಗಲಿದ್ದು, ಗಣಿ ಪ್ರದೇಶ, ಹೋಟೆಲ್, ಕೈಗಾರಿಕಾ ಪ್ರದೇಶ, ಕೊಳಚೆ ಪ್ರದೇಶ ಹಾಗೂ ಬೀದಿ ಮಕ್ಕಳನ್ನು ಗುರುತಿಸಿ ಗಣತಿ ಮಾಡಲು ಸೂಚಿಸಲಾಗಿದೆ.











Click it and Unblock the Notifications