3 ಈಡಿಯಟ್ಸ್ ಗಳಿಂದ ರ‌್ಯಾಗಿಂಗ್ ಗೆ ಪ್ರೇರಣೆ?
ಮುಂಬೈ,
ಜ. 5 : ಕಥೆಗೆ ಸಂಬಂಧಿಸಿದಂತೆ ಕಿತ್ತಾಟ ಮುಂದುವರೆಸಿರುವ ಅಮೀರ್ ಖಾನ್ ನಟನೆಯ ಥ್ರಿ ಈಡಿಯಟ್ಸ್ ಚಿತ್ರ ಇದೀಗ ಹೊಸದೊಂದು ವಿವಾದಕ್ಕೆ ಕಾರಣವಾಗಿದೆ. ಇತ್ತೀಚೆಗೆ ಇಲ್ಲಿನ ಸರಕಾರಿ ವೈದ್ಯಕೀಯ ಕಾಲೇಜಿನಲ್ಲಿ ನಡೆದ ರ‌್ಯಾಗಿಂಗ್ ಹೋಲುವ ದೃಶ್ಯಗಳು ಚಿತ್ರಗಳಿರುವುದು ಮತ್ತೊಂದು ವಿವಾದಕ್ಕೆ ಥ್ರಿ ಈಡಿಯಟ್ಸ್ ನಾಂದಿ ಹಾಡಿದೆ. ಈ ಆರೋಪಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸರಕಾರ ಚಿತ್ರದ ಕಥೆಯನ್ನು ಪರಿಶೀಲನೆ ಮಾಡುವುದಾಗಿ ಹೇಳಿದೆ. id="toptextpromo">ಜಿ
ಎಸ್ ಸೇಥ್ ವೈದ್ಯಕೀಯ ಕಾಲೇಜಿನಲ್ಲಿ ನಡೆದ ರ‌್ಯಾಗಿಂಗ್ ಘಟನೆಯು ಥ್ರಿ ಈಡಿಯಟ್ಸ್ ಚಿತ್ರದ ದೃಶ್ಯವೊಂದನ್ನು ಹೋಲುತ್ತದೆ ಎಂಬ ಮಾಧ್ಯಮಗಳ ವರದಿಯ ಹಿನ್ನೆಲೆಯಲ್ಲಿ ಚಿತ್ರದ ಕಥೆ ನೀಡುವಂತೆ ನಿರ್ಮಾಪಕರಲ್ಲಿ ಕೇಳಿದ್ದೇವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ವಿಜಯಕುಮಾರ್ ಗವಿತ್ ತಿಳಿಸಿದ್ದಾರೆ. ಚಿತ್ರಕಥೆಯನ್ನು ಕೂಲಂಕಷವಾಗಿ ಪರಿಶೀಲನೆ ನಡೆಸಿದ ಬಳಿಕ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಅವರು ವಿವರಿಸಿದರು. id='are-slot-1' class='oiad oi-axt oiadv'> id='top-searched-articles'>ಈ
ಮಧ್ಯೆ ರ‌್ಯಾಗಿಂಗ್ ಮಾಡಿದ ಆರೋಪಕ್ಕೆ ಒಳಗಾಗಿರುವ 18 ವಿದ್ಯಾರ್ಥಿಗಳನ್ನು ವಸತಿ ನಿಲಯದಿಂದ ಹೊರಹಾಕಲಾಗಿದೆ. ವಿದ್ಯಾರ್ಥಿಗಳನ್ನು ಹೊರಹಾಕಿರುವುದು ನಿಜ. ಆದರೆ, ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಮುಂದುವರಿಸಬಹುದು ಎಂದು ವೈದ್ಯಕೀಯ ಕಾಲೇಜು ಮತಕ್ತು ಪರೇಲ್ ಕೆಇಎಂ ಆಸ್ಪತ್ರೆಯ ಡೀನ್ ಸಂಜಯ್ ಓಕ್ ತಿಳಿಸಿದ್ದಾರೆ. ಸ್ಥಳೀಯ ಅಧಿಕಾರಿಗಳೊಂದಿಗೆ ನಡೆಸಿದ ಬಳಿಕ ಈ ತೀರ್ಮಾನ ಕೈಗೊಳ್ಳಲಾಯಿತು. ಈ ನಿರ್ಧಾರದ ಬಗ್ಗೆ ಪೊಲೀಸರಿಗೂ ಮಾಹಿತಿ ನೀಡಲಾಗಿದೆ ಓಕ್ ತಿಳಿಸಿದರು. ಅಮೀರ್ ಖಾನ್, ಮಾಧವನ್ ಮತ್ತು ಶರ್ಮನ್ ಜೋಶಿ ಥ್ರಿ ಈಡಿಯಟ್ಸ್ ನಟಿಸಿದ್ದಾರೆ. ಕಥೆಗೆ ಸಂಬಂಧಿಸಿದಂತೆ ಚೇತನ್ ಭಗತ್ ಮತ್ತು ನಿರ್ದೇಶಕ ವಿದು ವಿನೋದ್ ಚೋಪ್ರಾ ಅವರು ಬಹಿರಂಗವಾಗಿ ಕಿತ್ತಾಡಿಕೊಂಡು ಸುದ್ದಿ ಮಾಡಿದ್ದರು.











Click it and Unblock the Notifications