ಬೆಂಗಳೂರು : ಕಾವೇರಿ ನೀರು ಇನ್ನಷ್ಟು ದುಬಾರಿ
ಬೆಂಗಳೂರು,
ಜ. 5 : ಪ್ರಸ್ತುತ ಪ್ರತಿ ತಿಂಗಳಿಗೆ ಮೂರು ಕೋಟಿಗಳ ನಷ್ಟ ಭರಿಸುತ್ತಿರುವ ಬೆಂಗಳೂರು ಜಲಮಂಡಳಿ ಶೇ. 11 ರಷ್ಟು ನೀರಿನ ದರ ಹೆಚ್ಚಳ ಮಾಡುವ ಸಾಧ್ಯತೆ ಇದೆ. ವಿದ್ಯುತ್ ದರ ಏರಿಕೆ ಹಿನ್ನೆಲೆಯಲ್ಲಿ ನೀರಿನ ದರ ಹೆಚ್ಚಿಸುವ ಅನಿವಾರ್ಯತೆಯಿಂದಾಗಿ ಮಂಡಳಿ ದರ ಹೆಚ್ಚಳದ ಕಡೆಗೆ ಗಮನ ಹರಿಸಿದೆ. id="toptextpromo">ಬೇಸಿಗೆಯಲ್ಲಿ
ನೀರಿನ ಕೊರತೆ ಉಂಟಾಗುವುದರಿಂದ ಸಾರ್ವಜನಿಕರ ಕಡೆಯಿಂದ ದೂರುಗಳು ಹೆಚ್ಚಾಗಿರುತ್ತವೆ. ಅಂತಹ ಸಂದರ್ಭದಲ್ಲಿ ನೀರಿನ ದರ ಹೆಚ್ಚಿಸಿದರೆ ಜನರಿಂದ ಮತ್ತಷ್ಟು ಆಕ್ರೋಶ ವ್ಯಕ್ತವಾಗುತ್ತದೆ. ಹೀಗಾಗಿ ಬೇಸಿಗೆಗೆ ಮುನ್ನವೇ ದರ ಹೆಚ್ಚಿಸುವುದು ಸೂಕ್ತ ಎಂಬ ಅಭಿಪ್ರಾಯ ಮಂಡಳಿಯದಾಗಿದೆ. ಪ್ರಸ್ತುತ ಗೃಹ ಬಳಕೆ ನೀರಿನ ದರವು 8 ಸಾವಿರ ಲೀಟರ್ ವರೆಗೆ ಪ್ರತಿ ಕಿಲೋಮೀಟರ್ ಗೆ 6 ರುಪಾಯಿಯಂತೆ 48 ರುಪಾಯಿ ಕನಿಷ್ಠ ಶುಲ್ಕ ವಿಧಿಸಲಾಗುತ್ತದೆ. 8 ರಿಂದ 25 ಸಾವಿರ ಲೀಟರ್ ವರೆಗೆ 201 ರುಪಾಯಿ, 25 ರಿಂದ 50 ಸಾವಿರ ಲೀಟರ್ ಗೆ 676 ರುಪಾಯಿ, 50 ರಿಂದ 75 ಸಾವಿರ ಲೀಟರ್ ವರೆಗೆ 1326 ರುಪಾಯಿವರೆಗೆ, 75 ಸಾವಿರ ಲೀಟರ್ ನಂತರ ಪ್ರತಿ ಕಿಲೋಮೀಟರ್ ಗೆ 36 ರುಪಾಯಿ ವಿಧಿಸಲಾಗುತ್ತದೆ. id='are-slot-1' class='oiad oi-axt oiadv'> id='top-searched-articles'>ಗೃಹೇತರ
ಬಳಕೆಯ ನೀರಿನ ದರವು 10 ಸಾವಿರ ಲೀಟರ್ ವರೆಗೆ 360 ರುಪಾಯಿ, 10 ರಿಂದ 20 ಸಾವಿರ ಲೀಟರ್ ಗೆ 880 ರುಪಾಯಿ, 40 ರಿಂದ 80 60 ಸಾವಿರ ಲೀಟರ್ ನಂತರ ಪ್ರತಿ ಕಿಲೋ ಲೀಟರ್ ಗೆ 52 ರುಪಾಯಿ ದರ ವಿಧಿಸಲಾಗುತ್ತಿದೆ. ಈ ಹಿಂದೆ 2005 ಫೆಬ್ರವರಿ 2 ರಂದು ನೀರಿನ ದಜರ ಹೆಚ್ಚಿಸಲಾಗಿತ್ತು. ಆ ನಂತರ ಎರಡು ಬಾರಿ ವಿದ್ಯುತ್ ದರ ಏರಿಕೆಯಾದರೂ ನೀರಿನ ದರ ಹೆಚ್ಚಿಸಿರಲಿಲ್ಲ ಹೀಗಾಗಿ ಈ ಬಾರಿ ನೀರಿನ ದರ ಹೆಚ್ಚಿಸುವುದು ಅನಿವಾರ್ಯ ಎಂದು ಜಲಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.











Click it and Unblock the Notifications