ಲೈಂಗಿಕ ಕಿರುಕುಳ ಆರೋಪಿಗೆ ಮಾಜಿ ಸಿಎಂ ಬೆಂಬಲ
ಚಂಡಿಗಢ,
ಡಿ.25: ಉದಯೋನ್ಮುಖ ಟೆನಿಸ್ ಆಟಗಾರ್ತಿ ರುಚಿಕಾಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಅಲ್ಪ ಶಿಕ್ಷೆಗೊಳಗಾಗಿರುವ ಹರಿಯಾಣ ಮಾಜಿ ಡಿಜಿಪಿ ಎಸ್‌ಪಿಎಸ್ ರಾಥೋರ್ ವಿರುದ್ಧ ಸಾರ್ವಜನಿಕರ ಆಕ್ರೋಶ ತೀವ್ರವಾಗುತ್ತಿದೆ. id="toptextpromo">'1990ರಲ್ಲಿ
ಘಟನೆ ನಡೆದ ತರುವಾಯ ಅಂದಿನ ಮುಖ್ಯಮಂತ್ರಿ ಓಂ ಪ್ರಕಾಶ್ ಚೌತಾಲಾ ಆರೋಪಿ ರಾಥೋರ್‌ರನ್ನು ಸಂಪೂರ್ಣವಾಗಿ ಬೆಂಬಲಿಸಿದ್ದರು" ಎಂದು ರುಚಿಕಾ ಗಿರ್‍ಹೋತ್ರಾ ತಂದೆ ಸುದ್ದಿಗಾರರಿಗೆ ಗುರುವಾರ ತಿಳಿಸಿದ್ದಾರೆ. ಗಮನಾರ್ಹವೆಂದರೆ, 19 ವರ್ಷಗಳಲ್ಲಿ ಮೊದಲ ಬಾರಿಗೆ ಘಟನೆ ಬಗ್ಗೆ ಅವರು ಸಾರ್ವಜನಿಕವಾಗಿ ಪ್ರತಿಕ್ರಿ ಯಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'> 'ಆರು ತಿಂಗಳ ಶಿಕ್ಷೆ ಯಾವ ಲೆಕ್ಕಕ್ಕೆ? ಶಿಕ್ಷೆಯ ಪ್ರಮಾಣ ತಿಳಿದು ತಮ್ಮ ಕುಟುಂಬಕ್ಕೆ ತೀವ್ರ ದುಃಖವಾಗಿದೆ ಎಂದು ಗಿರ್‍ಹೋತ್ರಾ ತಿಳಿಸಿದ್ದಾರೆ. ಹರಿಯಾಣ ಲಾನ್ ಟೆನಿಸ್ ಒಕ್ಕೂಟದ ಅಧ್ಯಕ್ಷರೂ ಆಗಿದ್ದ ಆರೋಪಿ ರಾಥೋರ್, ಟೆನಿಸ್ ಕ್ಲಬ್‌ಗೆ ಅಭ್ಯಾಸಕ್ಕಾಗಿ ಬರುತ್ತಿದ್ದ ರುಚಿಕಾಗೆ 1990ರಆಗಸ್ಟ್ 12ರಂದು ಲೈಂಗಿಕ ಕಿರುಕುಳ ನೀಡಿದ್ದರು. ರಾಥೋರ್‌ಗೆ ಸಿಬಿಐ ನ್ಯಾಯಾಲಯ 19 ವರ್ಷಗಳ ಬಳಿಕ ಸೋಮವಾರ ಆರು ತಿಂಗಳ ಸಜೆ, ಒಂದು ಸಾವಿರ ರು. ದಂಡ ವಿಧಿಸಿದೆ. ರುಚಿಕಾ 1993ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.











Click it and Unblock the Notifications