ರಾಹುಲ್ ಗಾಂಧಿ ಮತ್ತೆ ಗ್ರಾಮ ವಾಸ್ಯವ್ಯ

ಇಂದು ಮಧ್ಯಾಹ್ನದ ನಂತರ ಜಾರ್ಟರ್ ಕಾಪ್ಟರ್ ಮೂಲಕ ಜಾನ್ಸಿ ನಗರಕ್ಕೆ ಆಗಮಿಸುವ ಸಂಸದ ರಾಹುಲ್ ಗಾಂಧಿ, ಇಲ್ಲಿಂದ 10 ಕಿಮೀ ದೂರದಲ್ಲಿರುವ ಗಿಸಾಲಿ ಗ್ರಾಮದಲ್ಲಿ ಸರಕಾರೇತರ ಸಂಸ್ಥೆಯೊಂದು ಏರ್ಪಡಿಸಿರುವ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ನಂತರ ಗ್ರಾಮ ವಾಸ್ಯವ್ಯ ಮಾಡಲಿದ್ದಾರೆ. ಬುಂಡೇಲಖಂಡ ಪ್ರದೇಶದ ಅತ್ಯಂತ ಹಿಂದುಳಿದ ಗ್ರಾಮವಾಗಿದ್ದು, ಈ ಗ್ರಾಮದಲ್ಲಿ ದಲಿತರ ಕುಟುಂಬಗಳೆ ಹೆಚ್ಚಾಗಿ ವಾಸಿಸುತ್ತವೆ. ರಾಹುಲ್ ಗಾಂಧಿ ಗ್ರಾಮ ವಾಸ್ತವ್ಯದ ಅಷ್ಟೂ ಸಂಗತಿಯನ್ನೂ ಗುಪ್ತವಾಗಿ ಇಡಲಾಗಿದೆ. ಭದ್ರತಾ ದೃಷ್ಟಿಯಿಂದ ಇದಕ್ಕೆ ಹೆಚ್ಚು ಪ್ರಚಾರ ನೀಡುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.












Click it and Unblock the Notifications