ಬೆಂಗಳೂರು, 37 ರಸ್ತೆಗಳಿಗೆ ಪಾರ್ಕಿಂಗ್ ಶುಲ್ಕ ಆರಂಭ
ಬೆಂಗಳೂರು,
ಡಿ. 19 : ರಾಜಧಾನಿಯ 37 ರಸ್ತೆಗಳಲ್ಲಿ ಹಣ ಪಾವತಿಸಿ ವಾಹನ ನಿಲುಗಡೆ ಮಾಡುವ ಪದ್ಧತಿ ಶೀಘ್ರದಲ್ಲೇ ಜಾರಿಗೆ ಬರಲಿದೆ. ಈ ಸಂಬಂಧ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿದ್ದು, ಜನವರಿಯಿಂದ ಅನುಷ್ಠಾನಗೊಳಿಸುವ ಸಾಧ್ಯತೆ ಇದೆ. id="toptextpromo">ಎಂಜಿ
ರಸ್ತೆ, ಬ್ರಿಗೇಡ್ ರಸ್ತೆ, ಕ್ವೀನ್ಸ್ ರಸ್ತೆ, ಕನ್ನಿಂಗ್ ಹ್ಯಾಂ ರಸ್ತೆ, ಇನ್ಫೆಂಟ್ ರಸ್ತೆ, ಕಾನ್ವೆಂಟ್ ರಸ್ತೆ, ಸೇಂಟ್ ಮಾರ್ಕ್ಸ್ ರಸ್ತೆ, ಜಯನಗರ ಸುತ್ತಮುತ್ತಲ ಪ್ರದೇಶ, ಕೋರಮಂಗಲ ಸೇರಿದಂತೆ ಒಟ್ಟು 37 ರಸ್ತೆಗಳಲ್ಲಿ ಗಂಟೆಗಳ ಆಧಾರದ ಮೇಲೆ ಹಣ ಪಾವತಿಸಿ ವಾಹನ ನಿಲುಗಡೆ ಮಾಡುವ ವ್ಯವಸ್ಥೆ ಜಾರಿಯಾಗಲಿದೆ. ಬಿಬಿಎಂಪಿ ಟೆಂಡರ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದು, ಒಂದು ವರ್ಷದ ಅವಧಿಗೆ ಪವವಾನಿಗೆ ನೀಡಿದೆ. id='are-slot-1' class='oiad oi-axt oiadv'> id='top-searched-articles'>ಜನವರಿ
1 ರಿಂದ ಪಾವತಿಸಿ ವಾಹನ ನಿಲುಗಡೆ ಮಾಡುವ ವ್ಯವಸ್ಥೆ ಜಾರಿಗೆ ಬರಲಿದೆ. ಈ ಹಿಂದೆ ನೀಡಲಾಗಿದ್ದ ಪರವಾನಿಗೆ ಅವಧಿ ಕೆಲ ತಿಂಗಳ ಹಿಂದೆ ಪೂರ್ಣಗೊಂಡಿತ್ತು. ಇದೀಗ ಒಂದು ವರ್ಷದ ಅವಧಿಗೆ ಪರವಾನಿಗೆ ನೀಡಲಾಗಿದೆ. ಟೆಂಡರ್ ಪ್ರಕ್ರಿಯೆ ಶುಕ್ರವಾರ ಪೂರ್ಣಗೊಂಡಿದೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.











Click it and Unblock the Notifications