ಲೋಕಸಭೆ ಪ್ರತಿಪಕ್ಷದ ನಾಯಕಿಯಾಗಿ ಸುಷ್ಮಾ ಸ್ವರಾಜ್
ನವದೆಹಲಿ,
ಡಿ.19: ಲೋಕಸಭೆ ವಿರೋಧ ಪಕ್ಷದನಾಯಕ ಸ್ಥಾನಕ್ಕೆ ಬಿಜೆಪಿ ನಾಯಕ ಎಲ್.ಕೆ.ಆಡ್ವಾಣಿ ರಾಜೀನಾಮೆ ನೀಡಿದ್ದು ಸುಷ್ಮಾ ಸ್ವರಾಜ್ ಅವರನ್ನು ಆ ಸ್ಥಾನಕ್ಕೆ ನೂತನ ನಾಯಕಿಯಾಗಿ ಆಯ್ಕೆ ಮಾಡಲಾಗಿದೆ. ಆರೆಸ್ಸೆಸ್ ಆಶಯಕ್ಕೆ ಅನುಗುಣವಾಗಿ ಬಿಜೆಪಿಯ ನಾಯಕತ್ವ ಬದಲು ಮಾಡಲಾಗಿದೆ. id="toptextpromo">ಹೊಸದಾಗಿ
ರಚಿಸಿರುವ ಸಂಸದೀಯ ಪಕ್ಷದ ಅಧ್ಯಕ್ಷ ಹುದ್ದೆಗೆ ಎಲ್.ಕೆ.ಆಡ್ವಾಣಿ ಅವರನ್ನು ಆಯ್ಕೆ ಮಾಡಲಾಗಿದೆ. ಇದುವರೆಗೂ ಲೋಕಸಭೆಯಲ್ಲಿ ವಿರೋಧ ಪಕ್ಷದ ಉಪನಾಯಕಿಯಾಗಿ ಸುಷ್ಮಾ ಸ್ವರಾಜ್ ಕಾರ್ಯನಿರ್ವಹಿಸುತ್ತಿದ್ದರು. ಇದೀಗ ಖಾಲಿಯಾಗಿರುವ ವಿರೋಧ ಪಕ್ಷದ ಉಪನಾಯಕ ಸ್ಥಾನಕ್ಕೆ ಅನಂತಕುಮಾರ್, ಗೋಪಿನಾಥ್ ಮುಂಡೆ, ಶಹನವಾಜ್ ಹುಸೇನ್ ಹೆಸರುಗಳು ಕೇಳಿಬಂದಿವೆ. id='are-slot-1' class='oiad oi-axt oiadv'> id='top-searched-articles'>ಆಡ್ವಾಣಿ
ಅವರು ಮಾತನಾಡುತ್ತಾ, ಇದು ನನ್ನ ನಿರ್ಗಮನವಲ್ಲ. ನಾನು ನಿಷ್ಕ್ರಿಯಗೊಳ್ಳುತ್ತೇನೆ, ರಾಜಕೀಯದಿಂದ ದೂರ ಸರಿಯುತ್ತೇನೆ, ಸಂಸತ್ತಿನಿಂದಲೂ ದೂರವಾಗುತ್ತೇನೆ ಎಂದು ಭಾವಿಸಿದರೆ ತಪ್ಪು. ನನ್ನ ಜೀವನದಲ್ಲಿ ಹೊಸ ಅಧ್ಯಾಯ ಪ್ರಾರಂಭವಾಗಿದೆ ಎಂದು ಆಡ್ವಾಣಿ ಪ್ರತಿಕ್ರಿಯಿಸಿದ್ದಾರೆ.











Click it and Unblock the Notifications