ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಸಕ ಸ್ಥಾನಕ್ಕೆ ಚಿರಂಜೀವಿ ರಾಜೀನಾಮೆ

By Staff
|
Google Oneindia Kannada News

Chiranjeevi
ವಿಜಯವಾಡ, ಡಿ.17: ಆಂಧ್ರದ ಶಾಸಕ, ನಟ ಜಿರಂಜೀವಿ ಮಾಧ್ಯಮದೆದುರು ರಾಜೀನಾಮೆ ಪತ್ರಕ್ಕೆ ಸಹಿ ಹಾಕುವ ಮೂಲಕ, ಪ್ರತ್ಯೇಕ ತೆಲಂಗಾಣ ರಾಜ್ಯಕ್ಕೆ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಪ್ರಜಾರಾಜ್ಯಂ ಪಕ್ಷದ ಅಧ್ಯಕ್ಷರಾದ ಚಿರಂಜೀವಿ ರಾಜ್ಯಪಾಲರಿಗೆ ರಾಜೀನಾಮೆ ಪತ್ರವನ್ನು ರವಾನಿಸಿ, ಅಖಂಡ ಆಂಧ್ರಪ್ರದೇಶ ಪಿಆರ್ ಪಿಯ ಕನಸು, ತೆಲಂಗಾಣ ಪ್ರಾಂತ್ಯದ ಅಭಿವೃದ್ಧಿ ಶ್ರಮಿಸೋಣ ಎಂದು ಕರೆ ಕೊಟ್ಟಿದ್ದಾರೆ.

ವಿಡಿಯೋ: ತಿರುಪತಿ ಶಾಸಕ ಚಿರಂಜೀವಿ ರಾಜೀನಾಮೆ

"ರಾತ್ರ್ರೋ ರಾತ್ರಿ ತೆಲಂಗಾಣ ರಾಷ್ಟ್ರ ಉದಯವಾಗದು, ಇದು ಏಕಪಕ್ಷೀಯ ನಿರ್ಣಯ. ಇದರಿಂದ ಪ್ರತ್ಯೇಕತೆಯ ಕೂಗು ಹೆಚ್ಚಲಿದೆ. ಇದು ಪ್ರಗತಿಗೆ ಮಾರಕವಾಗಿದೆ. ರಾಜ್ಯದಲ್ಲಿ ಎದ್ದಿರುವ ಸಾಮಾಜಿಕ, ರಾಜಕೀಯ ವಿಪ್ಲವಕ್ಕೆ ದೊಡ್ಡಪಕ್ಷಗಳೇ ಕಾರಣ. ಅನುಭವವುಳ್ಳ ಟಿಆರ್ ಪಿ ,ಕಾಂಗ್ರೆಸ್ ಪಕ್ಷಗಳು ರಾಜಕೀಯ ಲಾಭಕ್ಕಾಗಿ ರಾಜ್ಯದ ಹಿತಕ್ಕೆ ಕೊಡಲಿ ಏಟು ಕೊಟ್ಟಿದ್ದಾರೆ. ಅಖಂಡ ಆಂಧ್ರ ಪ್ರದೇಶವನ್ನು ಉಳಿಸುವುದು ಕೋಸ್ತಾ ಆಂಧ್ರ, ರಾಯಲಸೀಮಾ ಸೇರಿದಂತೆ ಎಲ್ಲಾ ಪ್ರಾಂತ್ಯದ ಜನರ ಅಭಿಮತವಾಗಿದೆ" ಎಂದು ಚಿರಂಜೀವಿ ಹೇಳಿದರು.

ರಾಯಲಸೀಮಾಕ್ಕೆ ಸೇರಿದ ತಿರುಪತಿ ಅಸೆಂಬ್ಲಿ ಕ್ಷೇತ್ರದಿಂದ ಚಿರಂಜೀವಿ ಶಾಸಕರಾಗಿ ಆಯ್ಕೆಯಾಗಿದ್ದರು. ಈ ಮುಂಚೆ ಪ್ರತ್ಯೇಕ ತೆಲಂಗಾಣ ರಾಜ್ಯಕ್ಕೆ ಬೆಂಬಲ ವ್ಯಕ್ತಪಡಿಸಿದ್ದ ಚಿರಂಜೀವಿ ಅವರ ಪ್ರಜಾರಾಜ್ಯ ಪಕ್ಷ, ಈಗ ಸಮಸ್ತ ಜನರ ಕೋರಿಕೆಯಂತೆ ಅಖಂಡ ಆಂಧ್ರಕ್ಕೆ ಮಾತ್ರ ಬೆಂಬಲ ಎಂದು ಘೋಷಿಸಿದೆ. ಪಿಆರ್ ಪಿಯ 18 ಜನ ಶಾಸಕರಲ್ಲಿ 15 ಜನ ಈಗಾಗಲೇ ಸ್ಪೀಕರ್ ಕಿರಣ್ ಕುಮಾರ್ ರೆಡ್ಡಿಗೆರಾಜೀನಾಮೆ ಸಲ್ಲಿಸಿದ್ದಾರೆ.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X