ಕ್ಯಾಪ್ ಜೆಮಿನಿಯಲ್ಲಿ ನೇಮಕಾತಿ ಹಬ್ಬ
ಬೆಂಗಳೂರು,
ಡಿ. 17: ಮುಂದಿನ 12 ತಿಂಗಳಲ್ಲಿ ಸುಮಾರು 6ಸಾವಿರ ಟೆಕ್ಕಿಗಳಿಗೆ ಉದ್ಯೋಗವಕಾಶ ನೀಡಲು ಮಾಹಿತಿ ತಂತ್ರಜ್ಞಾನ ಸೇವೆ ನೀಡುವ ಕ್ಯಾಪ್ ಜೆಮಿನಿ ಕಂಪೆನಿ ಮುಂದಾಗಿದೆ. ಪ್ಯಾರೀಸ್ ಮೂಲದ ಐಟಿ ಸಂಸ್ಥೆ ಸುಮಾರು 20ಸಾವಿರಕ್ಕೂ ಅಧಿಕ ಉದ್ಯೋಗಿಗಳನ್ನು ಹೊಂದಿದ್ದು, ಜಾಗತಿಕ ಮಟ್ಟದಲ್ಲಿ ಉನ್ನತಿಗೇರಲು ಹೆಚ್ಚಿನ ನೇಮಕಾತಿಯತ್ತ ಗಮನಹರಿಸಿದೆ. id="toptextpromo">ಚೆನ್ನೈನಲ್ಲಿ
ಕ್ಯಾಪ್ ಜೆಮಿನಿಯ ಕೇಂದ್ರದಲ್ಲಿ ಮೊದಲ ಹಂತದ ಕಾಮಗಾರಿ ಪ್ರಗತಿಯಲ್ಲಿದೆ. ಮುಂದಿನ ಫೆಬ್ರವರಿ -ಮಾರ್ಚ್ ವೇಳೆಗೆ ಸುಮಾರು 600 ಜನ ಕೆಲಸಗಾರರು ಅಲ್ಲಿಂದ ಕಾರ್ಯನಿರ್ವಹಿಸಲಿದ್ದಾರೆ. ನೇಮಕಾತಿ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು 1 ಸಾವಿರ ಮಂದಿಯನ್ನು ಈಗಾಗಲೇ ಕೆಲಸಕ್ಕೆ ತೆಗೆದುಕೊಳ್ಳಲಾಗಿದೆ. ಒಟ್ಟಾರೆ ಮುಂದಿನ ವರ್ಷಾಂತ್ಯಕ್ಕೆ ಸಂಸ್ಥೆಯಲ್ಲಿ 26 ಸಾವಿರಕ್ಕೂ ಅಧಿಕ ಉದ್ಯೋಗಿಗಳಿರುತ್ತಾರೆ ಎಂದು ಭಾರತ ಹಾಗೂ ಏಷ್ಯಾ ಫೆಸಿಫಿಕ್ ವಿಭಾಗದ ಸಿಇಒ(ಆರ್ಥಿಕ ಸೇವೆ) ಸಲೀಲ್ ಪರೇಖ್ ಹೇಳಿದರು. id='are-slot-1' class='oiad oi-axt oiadv'> id='top-searched-articles'>(ಏಜೆನ್ಸೀಸ್)












Click it and Unblock the Notifications