ಪ್ರತಿ ರಾಜ್ಯಕ್ಕೂ ಎನ್ ಎಸ್ ಜಿ ಘಟಕ: ಚಿದು

ಸದ್ಯದಲ್ಲೇ ಈ ಎಲ್ಲಾ ಕೇಂದ್ರಗಳಿಗೂ ರಾಜ್ಯ ಸರ್ಕಾರ ಚಾಲನೆ ನೀಡಲಿದೆ. ದೀರ್ಘಕಾಲದಲ್ಲಿ ಪ್ರತೀ ರಾಜ್ಯದಲ್ಲೂ ಅತ್ಯಾಧುನಿಕ ಎನ್‌ಎಸ್‌ಜಿ ಕೇಂದ್ರ ತೆರೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ಚಿದಂಬರಂ ಅವರು ವಿವರಿಸಿದರು. ಕೇಂದ್ರ ಸರ್ಕಾರದ ಯೋಜನೆಯಂತೆ, ಈಗಾಗಲೇ ಹೈದರಾಬಾದ್, ಮುಂಬೈ,ಚೆನ್ನೈ ಹಾಗೂ ಕೋಲ್ಕತ್ತಾಗಳಲ್ಲಿ ಜುಲೈ 1ರಿಂದಲೇ ಎನ್‌ಎಸ್‌ಜಿ ಕೇಂದ್ರಗಳು ಕಾರ್ಯಾರಂಭ ಮಾಡಿವೆ.
ಮುಂಬರುವ ದಿನಗಳಲ್ಲಿ ಕೋಬ್ರಾ ಕಾನೂನಿಗೆ ತಿದ್ದುಪಡಿ ತರಲಾಗುವುದು ಎನ್ ಎಸ್ ಜಿ ಕೇಂದ್ರಗಳ ಸಂಖ್ಯೆಯನ್ನು 10 ಕ್ಕೇರಿಸಲಾಗುವುದು ಎಂದು ಅವರು ವಿವರಿಸಿದರು.ಕೇಂದ್ರ ಸರ್ಕಾರ ಈಗಾಗಲೇ, ಅರೆಸೇನಾಪಡೆ ತರಬೇತಿ ಕೇಂದ್ರದ ಆಧುನೀಕರಣಕ್ಕೆ ಸಾಕಷ್ಟು ಅನುದಾನ ಬಿಡುಗಡೆಗೊಳಿಸಿದೆ. ಅಗತ್ಯ ಬಿದ್ದರೆ ಇನ್ನಷ್ಟು ಹೆಚ್ಚಿಸಲು ಸರ್ಕಾರ ಸಿದ್ಧವಿದೆ ಎಂದು ಚಿದು ಭರವಸೆ ನೀಡಿದರು.
(ಏಜೆನ್ಸೀಸ್)












Click it and Unblock the Notifications