ಲೆಕ್ಕಪತ್ರ ಸಮಿತಿಗೆ ಜಸ್ವಂತ್ ರಾಜೀನಾಮೆ

ಪಕ್ಷ ವಿರೋಧಿ ಚಟುವಟಿಕೆಯಿಂದ ಬಿಜೆಪಿಯಿಂದ ಉಚ್ಚಾಟಿತರಾಗಿದ್ದ ಜಸ್ವಂತ್ ಅವರನ್ನು ಈ ಹುದ್ದೆಯಿಂದ ಕೆಳಗಿಳಿಯುವಂತೆ ಬಿಜೆಪಿ ಹಲವು ಬಾರಿ ಸೂಚಿಸಿದ್ದರೂ ಪಟ್ಟು ಬಿಡದೆ ಹುದ್ದೆಯಲ್ಲಿ ಮುಂದುವರಿದಿದ್ದರು. ಸ್ಪೀಕರ್ ಮೀರಾ ಕುಮಾರ್ ಜಸ್ವಂತ್ ಅವರ ರಾಜೀನಾಮೆಯನ್ನುಆಂಗಿಕರಿಸಿದ್ದಾರೆ.
ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಹುದ್ದೆಯಲ್ಲಿ ಮುಂದುವರಿಯುತ್ತಿರುವುದಕ್ಕೆ ಜಸ್ವಂತ್ ಅವರನ್ನು ನೇರವಾಗಿ ಹಲವು ಬಾರಿ ತರಾಟೆಗೆ ತೆಗೆದುಕೊಂಡಿದ್ದರು. ಪಾಕ್ ಸಂಸ್ಥಾಪಕ ಮೊಹಮ್ಮದ್ ಆಲಿ ಜಿನ್ನಾ ಅವರನ್ನು ಹೊಗಳಿ ಪುಸ್ತಕ ಪ್ರಕಟಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಜಸ್ವಂತ್ ಸಿಂಗ್ ಅವರನ್ನು ಪಕ್ಷದಿಂದ ಉಚ್ಚಾಟಿಸಿತ್ತು.
(ಏಜೆನ್ಸೀಸ್)












Click it and Unblock the Notifications