ಡಿ 11 ರಿಂದ 20ರ ವರೆಗೆ ಬೆಂಗಳೂರು ಹಬ್ಬ
ಬೆಂಗಳೂರು, ಡಿ. 8 : ಏರ್ ಟೆಲ್ ಬೆಂಗಳೂರು ಹಬ್ಬ ಡಿಸೆಂಬರ್ 11 ರಿಂದ 20 ರವರೆಗದೆ ನಗರದ ವಿವಿಧ ಬಡಾವಣೆಗಳಲ್ಲಿ ನಡೆಯಲಿದೆ. ಕಲಾವಿದರನ್ನು ಪ್ರೋತ್ಸಾಹಿಸುವ ಸದುದ್ದೇಶದೊಂದಿಗೆ ಆಚರಿಸುತ್ತಿರುವ ಈ ಹಬ್ಬ ಪ್ರತಿಯೊಬ್ಬರಿಗೂ ಕಲಾತ್ಮಕ ಪ್ರದರ್ಶನದ ಸಂಗಮ ಮಾಡಿಸಲಿದೆ.
ವಿಭಿನ್ನ ಕಲೆ, ಕ್ರಾಫ್ಟ್, ನೃತ್ಯ, ಸಂಗೀತ, ರಂಗಭೂಮಿ ಮತ್ತು ಸಿನಿಮಾ ಪ್ರಭೇತಗಳಾದ್ಯಂತ ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಕಲಾವಿದರನ್ನು ಒಗ್ಗೂಡಿಸಿ ರಸದೌತಣ ನೀಡಲಿದೆ. ಜಾಜ್ ಇವ್ನಿಂಗ್ಸ್, ಅರ್ಟ್ಸ್ ಅಂಡ್ ಕ್ರಾಫ್ಟ್ ಮೇಳ, ಮಕ್ಕಳ ಚಿತ್ರೋತ್ಸವ, ಯಕ್ಷಗಾನ ಪ್ರದರ್ಶನಗಳಿವೆ. ಅಪ್ಪಾರಾಮ್ ಗ್ಯಾಲರೀಸ್ ಸಹಯೋಗದಲ್ಲಿ ನಡೆಯುವ ಇಂಡಿಯನ್ ಅರ್ಟ್ಸ್ ಟ್ರಯಲ್ ಈ ಬಾರಿಯ ಹಬ್ಬದ ವಿಶೇಷ ಕಲಾ ಉತ್ಸವ. ಏರ್ ಟೆಲ್ ಮತ್ತು ಕಿಂಗ್ ಫಿಷರ್ ಸಹಯೋಗ ಹಾಗೂ ಬೆಂಗಳೂರು ಕಲಾವಿದರ ಸಹಕಾರ ಹಬ್ಬಕ್ಕಿದೆ ಎಂದು ಹಬ್ಬ ರೂವಾರಿಗಳಾದ ನಂದಿನಿ ಆಳ್ವ, ಮತ್ತಪ ಪದ್ಮಿನಿ ರವಿ ಮಾಧ್ಯಮ ಪ್ರತಿನಿಧಿಗಳಿಗೆ ವಿವರಿಸಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications