ರಷ್ಯಾದಲ್ಲಿ ಭಾರಿ ಸ್ಫೋಟ: 102 ಮಂದಿ ಸಾವು

Death toll from Russia's Urals blast up to 102
ಮಾಸ್ಕೊ, ಡಿ.5: ರಷ್ಯಾದ ಪೆರ್ಮ್ ಬಳಿಯ ಉರಲ್ಸ್ ನಗರದ ನೈಟ್ ಕ್ಲಬ್ ನಲ್ಲಿ ಶುಕ್ರವಾರ ಮಧ್ಯರಾತ್ರಿ ಭಾರಿ ಸ್ಫೋಟ ಸಂಭವಿಸಿದೆ. ಈ ದುರ್ಘಟನೆಯಲ್ಲಿ 102 ಹೆಚ್ಚು ಮಂದಿ ಮೃತಪಟ್ಟಿದ್ದು 135 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ 85 ಮಂದಿ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ರಷ್ಯಾದ ಮಾಧ್ಯಮ ವರದಿಗಳು ಹೇಳುತ್ತಿವೆ.

ಸ್ಫೋಟ ಸಂಭವಿಸಿದ ಸಮಯದಲ್ಲಿ ಕ್ಲಬ್ ನಲ್ಲಿ 200ಕ್ಕೂ ಹೆಚ್ಚು ಮಂದಿ ಇದ್ದರು. ಇವರಲ್ಲಿ ಬಹಳಷ್ಟು ಮಂದಿ ಕ್ಲಬ್ ನ ಉದ್ಯೋಗಿಗಳು ಹಾಗೂ ಅವರ ಕುಟುಂಬದವರು ಎಂಬುದು ಗಮನಾರ್ಹ. ಈ ಘಟನೆ ಮಾಸ್ಕೊ ಕಾಲಮಾನದ ಪ್ರಕಾರ ರಾತ್ರಿ 11.15ಕ್ಕೆ ಸಂಭವಿಸಿದೆ.

ನೈಟ್ ಕ್ಲಬ್ ಎಂಟನೇ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿರಬೇಕಾದರೆ ಈ ದುರ್ಘಟನೆ ಸಂಭವಿಸಿದೆ. ಭಾರಿ ಮೊತ್ತದ ಪಟಾಕಿ ಸಿಡಿದ ಪರಿಣಾಮ ಈ ಘಟನೆ ಸಂಭವಿಸಿದೆ . ಸ್ಫೋಟಕ್ಕೆ ಭಯಪಟ್ಟು ನೈಟ್ ಕ್ಲಬ್ ನಿಂದ ಹೊರಗೆ ಹೋಗಲು ಪ್ರಯತ್ನಿಸಿದಾಗ ನೂಕು ನುಗ್ಗಲಿನಲ್ಲಿ ಈ ದುರಂತ ಸಂಭವಿಸಿದೆ.

(ಏಜೆನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+