ಯುನಿನಾರ್ : ಮತ್ತೊಂದು ಮೊಬೈಲ್ ಸೇವೆ ಶುರು

ನಾರ್ವೆ ದೇಶದ ಟೆಲೆನಾರ್ ಮತ್ತು ಯುನಿಟೆಕ್ ನ ಜಂಟಿ ಸಂಸ್ಥೆಯಾಗಿರುವ ಯುನಿನಾರ್, ಕರ್ನಾಟಕವೂ ಸೇರಿದಂತೆ ದೇಶದ ಏಳು ವೃತ್ತದಲ್ಲಿ ಗುರುವಾರ ಏಕಕಾಲಕ್ಕೆ ತನ್ನ ಜಿಎಸ್ಎಂ ಸೇವೆ ಆರಂಭಿಸಿತು. ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಉತ್ತರ ಪ್ರದೇಶದ ಪೂರ್ವ ಭಾಗ, ಜಾರ್ಖಂಡ್ ಹಾಗೂ ಬಿಹಾರ್ ರಾಜ್ಯದಲ್ಲಿ ಸೇವೆ ಜಾರಿಗೆ ಬಂದಿದೆ.
ಪ್ರಚಾರಕ್ಕೆ ಖ್ಯಾತನಾಮರನ್ನು ಬಳಸಿಕೊಳ್ಳಲು ನಿರ್ಧರಿಸಿರುವ ಕಂಪನಿ ಇತರರಿಗಿಂತ ವಿಭಿನ್ನ ಬಗೆಯಲ್ಲಿ ಸೇವಾ ಸೌಲಭ್ಯ ಒದಗಿಸಲಿದೆ. ಮಧ್ಯಮ ತ್ತು ಗರಿಷ್ಠ ಆದಾಯದ ಗ್ರಾಹಕರನ್ನು ಗುರಿಯಾಗಿಸಿರಿಕೊಂಡು ಈ ಸೇವೆಗೆ ಚಾಲನೆ ನೀಡಲಾಗಿದೆ ಎಂದು ಸಂಸ್ಥೆಯ ಕರ್ನಾಟಕ ವೃತ್ತದ ಉಪಾಧ್ಯಕ್ಷೆ ಆನ್ ಹೋಪ್ವಂಡರ್ ಮಾಧ್ಯಮಗಳಿಗೆ ವಿವರಿಸಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications