ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಚಿತ ಸುದ್ದಿ ವೀಕ್ಷಣೆಗೆ ಕಡಿವಾಣ : ಗೂಗಲ್

By Staff
|
Google Oneindia Kannada News

Google news
ವಾಷಿಂಗ್ಟನ್‌, ಡಿ.3: ಮುದ್ರಣಗಾರರ ಒತ್ತಡಕ್ಕೆ ಮಣಿದ ಗೂಗಲ್ ಸಂಸ್ಥೆ , ತನ್ನ ಸರ್ಚ್ ಇಂಜಿನ್ ಮೂಲಕ ಸಿಗುವ ಸುದ್ದಿಗೆ ಕೊಂಚ ಮಟ್ಟಿನ ಕಡಿವಾಣ ಹಾಕಲು ನಿರ್ಧರಿಸಿದೆ. ಹೊಸ ವಿಧಾನದ ಪ್ರಕಾರ ಒಂದೇ ವೆಬ್‌ ತಾಣದಿಂದ ಐದಕ್ಕಿಂತ ಹೆಚ್ಚಿನ ಲೇಖನಗಳನ್ನುವೀಕ್ಷಿಸ ಬೇಕಾದರೆ ನೋಂದಣಿ ಮಾಡಿಕೊಳ್ಳಬೇಕು ಅಥವಾ ತಾಣದ ನಿಯಮಗಳನ್ನು ಪಾಲಿಕೆಗೆ ಬದ್ಧರಾಗಿರಬೇಕು ಎಂದು ಗೂಗಲ್ ತಿಳಿಸಿದೆ. ಪೂರ್ಣನಿಯಾಮಾವಳಿಗಳನ್ನು ಸದ್ಯದಲ್ಲೇ ಹೊರಬರಲಿದೆ.

ನ್ಯೂಸ್ ಕಾರ್ಪೊರೇಷನ್ ಅಧ್ಯಕ್ಷ ಮತ್ತು ಸಿಇಒ ರೂಪರ್ಟ್ ಮುರ್ಡೋಕ್ ಸೇರಿದಂತೆ ಹಲವು ಮಾಧ್ಯಮ ಪ್ರಕಾಶಕರ ಬೇಡಿಕೆಯಂತೆ ಗೂಗಲ್ ಸರ್ಚ್ ಇಂಜಿನ್ ಆನ್‌ಲೈನ್ ಸುದ್ದಿ ಪುಟಗಳಿಂದ ತಮಗೆ ಆದಾಯ ಬರುತ್ತಿತ್ತು ಎಂದು ವೆಬ್‌ಸೈಟ್‌ಗಳು ವಾದಿಸಿದ್ದವು. ಹಾಗಾಗಿ ಚಂದಾದಾರರಾಗದ ವೀಕ್ಷಕರಿಗೆ ವೆಬ್‌ಸೈಟ್‌ಗಳ ಸುದ್ದಿಯನ್ನು ಒದಗಿಸುವಾಗ, ಗೂಗಲ್ ಕೇವಲ ಐದು ಸುದ್ದಿಗಳಿಗೆ ಮಾತ್ರ ಉಚಿತ ಪ್ರವೇಶವನ್ನು ನೀಡುತ್ತದೆ. ಒಂದೇ ವೆಬ್‌ಸೈಟಿನ ಐದಕ್ಕಿಂತ ಹೆಚ್ಚು ಸುದ್ದಿಗಳನ್ನು ಓದಬೇಕಾದಲ್ಲಿ ಸಂಬಂಧಪಟ್ಟ ತಾಣದಲ್ಲಿ ನೋಂದಣಿ ಅಥವಾ ಚಂದಾದಾರರಾಗುವುದು ಅನಿವಾರ್ಯವೆನಿಸಲಿದೆ.

ಇಂತಹ ಚಂದಾದಾರ ವ್ಯವಸ್ಥೆಯನ್ನು ಹೊಂದಿರುವ ವೆಬ್‌ಸೈಟುಗಳಿಗೆ ಮಾತ್ರ ಇದು ಅನ್ವಯಿಸುತ್ತದೆ. ಈ ಹಿಂದೆ ಗೂಗಲ್ ಸರ್ಚ್ ಇಂಜಿನ್‌ನಿಂದ ಎಷ್ಟು ಸುದ್ದಿಗಳನ್ನು ಬೇಕಾದರೂ ಉಚಿತವಾಗಿ ಯಾವುದೇ ಸೈಟುಗಳಿಂದ ವೀಕ್ಷಿಸಬಹುದಾಗಿತ್ತು.ಎಂದು ಗೂಗಲ್ ಸಂಸ್ಥೆ ತಿಳಿಸಿದೆ.ನೋಂದಣಿ ಅಥವಾ ಚಂದಾದಾರರಾಗದೆ ದಿನಕ್ಕೆ ಐದು ಲೇಖನಗಳನ್ನು ಮಾತ್ರ ನೋಡುವಂತೆ ನಿರ್ಬಂಧಗೊಳಿಸುವ ನೂತನ ಸಾಫ್ಟ್‌ವೇರನ್ನು ನಾವು ಗೂಗಲ್ ಸರ್ಚ್ ಇಂಜಿನ್‌ನಲ್ಲಿ ಅಳವಡಿಸಿದ್ದೇವೆ ಎಂದು ಗೂಗಲ್ ಸಂಸ್ಥೆ ಹೇಳಿದೆ.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X