ಶ್ರೀಕುಮಾರ್‌ಗೆ ಅಣುಶಕ್ತಿ ಚುಕ್ಕಾಣಿ
ನವದೆಹಲಿ,
ನ. 27 : ಅಣು ಶಕ್ತಿ ಆಯೋಗದ (ಎಇಸಿ) ಮತ್ತು ಅಣುಶಕ್ತಿ ಸಚಿವಾಲಯ ಅಧ್ಯಕ್ಷರಾಗಿ ಡಾ ಶ್ರೀಕುಮಾರ್ ಬ್ಯಾನರ್ಜಿ ನಿಯುಕ್ತಿ ಗೊಂಡಿದ್ದಾರೆ. ಆಯೋಗದ ಹಾಲಿ ಅಧ್ಯಕ್ಷ ಅನಿಲ್ ಕಾಕೋಡ್ಕರ್ ಸೇವಾವಧಿ ನ. 30ಕ್ಕೆ ಕೊನೆಗೊಳ್ಳಲಿದ್ದು, ಅವರ ಸ್ಥಾನಕ್ಕೆ ಶ್ರೀಕುಮಾರ್ ನೇಮಕಗೊಂಡಿದ್ದಾರೆ. id="toptextpromo">63
ವರ್ಷದ ಬ್ಯಾನರ್ಜಿ ಪ್ರಸ್ತುತ ಬಾಬಾ ಅಣು ಸಂಶೋಧನಾ ಕೇಂದ್ರದ ನಿರ್ದೇಶಕರಾಗಿದ್ದು, ಡಿಸೆಂಬರ್ 1ರಂದು ಆಯೋಗದ ಅಧ್ಯಕ್ಷರಾಗಿ ಅವರು ಅಧಿಕಾರವಹಿಸಿಕೊಳ್ಳಲಿದ್ದಾರೆ. ಮೂರು ವರ್ಷ ಕಾಲ ಶ್ರೀಕುಮಾರ್ ಅವರು ಅಣುಶಕ್ತಿ ಸಚಿವಾಲಯದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಲಿದ್ದಾರೆ. id='are-slot-1' class='oiad oi-axt oiadv'> id='top-searched-articles'>(ಏಜನ್ಸೀಸ್)












Click it and Unblock the Notifications