ಬೆಂಗಳೂರಿನಲ್ಲಿ ಮಿಡ್ ನೈಟ್ ಮಸಾಲಾ : 20 ಬಂಧನ

ನಗರದ ಸೇಂಟ್ ಮಾರ್ಕ್ಸ್ ರಸ್ತೆಯ ಶೂಲೆ ವೃತ್ತದಲ್ಲಿರುವ ಟೊಪಾಜ್ ಬಾರ್ ನಲ್ಲಿ ಬುಧವಾರ ಮಧ್ಯರಾತ್ರಿವರೆಗೂ 20 ಮಂದಿ ಯುವತಿಯರು ಅಶ್ಲೀಲ ನೃತ್ಯದಲ್ಲಿ ತೊಡಗಿದ್ದರು. ವಿಷಯ ತಿಳಿದ ತಕ್ಷಣ ಕಾರ್ಯಪ್ರವೃತ್ತರಾದ ಕಬ್ಬನ್ ಪಾರ್ಕ್ ಪೊಲೀಸರು ಬಾರ್ ಮೇಲೆ ದಿಢೀರ್ ದಾಳಿ ನಡೆಸಿ ಬಾರ್ ನ ಮಾಲೀಕ ಮುರಳೀಧರ್ ಮತ್ತು ಸಚಿನ್ ಸೇರಿದಂತ ಬಾರ್ ನ 18 ಮಂದಿ ಸಿಬ್ಬಂದಿ ಹಾಗೂ 20 ಮಂದಿ ಯುವತಿ ಬಂಧಿಸಿದ್ದಾರೆ.
ಬಾರ್ ನಲ್ಲಿ ಅನೈತಿಕ ಕೃತ್ಯಗಳು ನಡೆಯುತ್ತಿದ್ದವು. ಸಿಕ್ಕಿಬಿದ್ದ ಯುವತಿಯರು ಪಂಜಾಬ, ರಾಜಸ್ತಾನ ಮತ್ತು ದೆಹಲಿಯ ಮೂಲದವರಾಗಿದ್ದಾರೆ. ಬಂಧಿತ ಯುವತಿಯರನ್ನು ಕೋರಮಂಗಲದ ವುಮೆನ್ ಸೆಂಟರಿನಲ್ಲಿ ಇರಿಸಲಾಗಿದ್ದು, ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ. ಆರೋಪಿಗಳನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸುವುದಾಗಿ ಪೊಲೀಸರು ತಿಳಿಸಿದ್ದಾರೆ. ಶೂಲೆ ವೃತ್ತದಲ್ಲಿ ನಡೆಯುತ್ತಿರುವ ಇಂತಹ ಅನೈತಿಕ ಚಟುವಟಿಕೆಗಳಿಂದ ಈ ವೃತ್ತದ ಹೆಸರೇ ಇದೀಗ ಬದಲಾಗಿದೆ ಹೋಗಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications