ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೇಟಿ ಬಚಾವೋ ಆಂದೋಲನ ಆರಂಭ

|
Google Oneindia Kannada News

Pramod Mutalik
ಮಂಗಳೂರು, ನ. 3 : ರಾಜ್ಯದಲ್ಲಿ ಲವ್ ಜಿಹಾದ್ ಹಾವಳಿ ಹೆಚ್ಚಿದ ಹಿನ್ನೆಲೆಯಲ್ಲಿ ಹಿಂದೂ ಜನಾಂಗದ ಎಚ್ಚರಿಕೆಗಾಗಿ ಬೇಟಿ ಬಚಾವೋ (ಮಗಳನ್ನು ಉಳಿಸಿ) ಆಂದೋಲನವನ್ನು ಶೀಘ್ರದಲ್ಲಿ ಆರಂಭಿಸುವುದಾಗಿ ಶ್ರೀರಾಮಸೇನೆ ಸಂಘಟನೆ ಮುಖಂಡ ಪ್ರಮೋದ್ ಮುತಾಲಿಕ್ ಘೋಷಿಸಿದ್ದಾರೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ದಕ್ಷಿಣ ಭಾರತದಲ್ಲಿ ವ್ಯವಸ್ಥಿತವಾಗಿ ನಡೆಯುತ್ತಿರುವ ಈ ಷಡ್ಯಂತ್ರ ತಡೆಯಲು ಈ ಆಂದೋಲನ ಅನಿವಾರ್ಯ ಎಂದರು. ಕಳೆದ ಒಂದೆರಡು ವರ್ಷಗಳಿಂದ ಮುಸ್ಲಿಂ ಯುವಕರು ಹಿಂದೂ ಯುವತಿರನ್ನು ಪ್ರೀತಿಸುವ ನೆಪದಲ್ಲಿ ಲವ್ ಜಿಹಾದ್ ಆರಂಭಿಸಿದ್ದಾರೆ. ಇದರ ಹಿಂದೆ ಭಯೋತ್ಪಾದಕ ಸಂಘಟನೆಗಳ ಕೈವಾಡ ಇರುವ ಶಂಕೆಯೂ ವ್ಯಕ್ತವಾಗಿದೆ. ಈ ಕೃತ್ಯ ಹೀಗೆ ಬಿಟ್ಟರೆ ದೇಶದ ಸಮಗ್ರತೆ ಹಾಗೂ ಏಕತೆಗೆ ಧಕ್ಕೆ ಎದುರಾಗುವ ದಿನಗಳು ದೂರವಿಲ್ಲ. ಆದ್ದರಿಂದ ಈ ಬಗ್ಗೆ ಎಲ್ಲರೂ ಗಮನಹರಿಸಿಬೇಕು ಎಂದು ಮುತಾಲಿಕ್ ಪ್ರತಿಪಾದಿಸಿದರು.

ಮುಸ್ಲಿಂ ಯುವಕರು ಹಿಂದೂ ಯವತಿಯರನ್ನು ಗಿಮಕ್ ಮೂಲಕ ಬುಟ್ಟಿದೆ ಹಾಕಿಕೊಂಡು ಮದುವೆಯಾಗುತ್ತಾರೆ. ನಂತರ ಕೆಲ ವರ್ಷಗಳ ನಂತರ ಕೈಬಿಟ್ಟಿರುವ ಅನೇಕ ಉದಾಹರಣೆಗಳು ನಮ್ಮ ಮುಂದಿವೆ. ಆದ್ದರಿಂದ ತಂದೆ ತಾಯಿಂದಿರು ತನ್ನ ಮಗಳ ಬಗ್ಗೆ ಭಾರಿ ಎಚ್ಚರಿಕೆಯಿಂದ ಇರಬೇಕಾಗಿರುವುದು ಅವಶ್ಯಕ. ಶಾಲೆ, ಕಾಲೇಜ್ ಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ನಿಮ್ಮ ಮಗಳ ಬಗ್ಗೆ ಜಾಗರೂಕರಾಗಿರಲು ಈ ಆಂದೋಲನ ಆರಂಭಿಸುತ್ತಿರುವುದಾಗಿ ಮುತಾಲಿಕ್ ಹೇಳಿದರು.

ಈ ಆಂದೋಲನಕ್ಕೆ 25 ಸಾವಿರ ತರಬೇತಿ ಹೊಂದಿದ ಸೇನೆ ಕಾರ್ಯಕರ್ತರು ಕಾರ್ಯ ನಿರ್ವಹಿಸುತ್ತಾರೆ. ಲವ್ ಜಿಹಾದ್ ಕಂಡುಬರುತ್ತಿರುವ ಸ್ಥಳಗಳಲ್ಲಿ ಸೇನೆ ಕಾರ್ಯಕರ್ತರು ಕೆಲಸ ನಿರ್ವಹಿಸುತ್ತಾರೆ. ಲವ್ ಜಿಹಾದ್ ಕುಕೃತ್ಯ ಹೊಂದಿದ 25 ಸಾವಿರ ಸಿಡಿಗಳು, ಒಂದು ಬುಕ್ ಲೆಟ್ ಗಳು, 10 ಲಕ್ಷ ಹ್ಯಾಂಡ್ ಬಿಲ್ ಗಳು, 50 ಸಾವಿರ ಬಿತ್ತಿಪತ್ರಿಗಳು ಮೂಲಕ ಆಂದೋಲನ ಆರಂಭಿಸಲಾಗುವುದು. ರಾಜ್ಯಾದ್ಯಂತ ಪ್ರವಾಸ ಮಾಡುವುದಾಗಿ ಮುತಾಲಿಕ್ ಹೇಳಿದರು.

ಕರ್ನಾಟಕ ಫೋರಂ ಫಾರ್ ಡಿಗ್ನಿಟಿ ಸಂಘವು ಲವ್ ಜಿಹಾದ್ ಕೃತ್ಯದಲ್ಲಿ ತೊಡಗಿರುವುದನ್ನು ಕೇರಳ ಹೈಕೋರ್ಟ್ ಸ್ಪಷ್ಟಪಡಿಸಿದೆ. ರಾಜ್ಯದ 7500 ಹಿಂದೂ ಯುವತಿಯರು ಲವ್ ಜಿಹಾದ್ ಕೃತ್ಯಕ್ಕೆ ಬಲಿಯಾಗಿದ್ದಾರೆ. ಮುಂದೆ ಹಾಗಾಗಲು ಬಿಡಬಾರದು ಎನ್ನುವ ಕಾರಣಕ್ಕೆ ಆಂದೋಲನ ಆರಂಭಿಸಲಾಗಿದೆ ಎಂದು ಅವರು ಹೇಳಿದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X